ಮೈಕ್ರೋಸಾಫ್ಟ್‌ ನ 365 ಆ್ಯಪ್‌ಗಳು ಮತ್ತು ಸೇವೆಗಳಲ್ಲಿ ತಾಂತ್ರಿಕ ವೈಫಲ್ಯ: ಹಲವು ಸಮಸ್ಯೆ ಸೃಷ್ಟಿ

19/07/2024

ಮೈಕ್ರೋಸಾಫ್ಟ್‌ ನ 365 ಆ್ಯಪ್‌ಗಳು ಮತ್ತು ಸೇವೆಗಳಲ್ಲಿ ಇಂದು ಉಂಟಾದ ತಾಂತ್ರಿಕ ವೈಫಲ್ಯ ಹಲವು ಸಮಸ್ಯೆಗಳನ್ನು ಸೃಷ್ಟಿಸಿದೆ. ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್‌ನಲ್ಲಿ ಬ್ಯಾಂಕ್‌ಗಳ ಕಂಪ್ಯೂಟರ್‌ ವ್ಯವಸ್ಥೆ ಬಾಧಿತವಾಗಿದ್ದರೆ ಭಾರತದಲ್ಲಿ ಪ್ರಮುಖ ವಿಮಾನಯಾನ ಸಂಸ್ಥೆಗಳಾದ ಆಕಾಸಾ, ಇಂಡಿಗೋ, ಏರ್‌ ಇಂಡಿಯಾ ಮತ್ತು ಸ್ಪೈಸ್‌ಜೆಟ್‌ ಕೂಡ ಸಮಸ್ಯೆಗಳನ್ನು ಎದುರಿಸಿವೆ.

ದಿಲ್ಲಿ ಹಾಗೂ ಬೆಂಗಳೂರು ವಿಮಾನ ನಿಲ್ದಾಣಗಳಲ್ಲೂ ಕೆಲ ಸೇವೆಗಳು ಬಾಧಿತವಾಗಿವೆ. ಹಲವು ವಿಮಾನಯಾನ ಸಂಸ್ಥೆಗಳು ಸೇವೆಯಲ್ಲುಂಟಾದ ವ್ಯತ್ಯಯಗಳ ಬಗ್ಗೆ ಹೇಳಿಕೆಗಳನ್ನು ಬಿಡುಗಡೆಗೊಳಿಸಿವೆ.

ಮೈಕ್ರೋಸಾಫ್ಟ್‌ ಸೇವೆಯಲ್ಲಿ ತಾಂತ್ರಿಕ ವೈಫಲ್ಯದಿಂದ ಲಂಡನ್‌ ಸ್ಟಾಕ್‌ ಎಕ್ಸ್‌ಚೇಂಜ್‌ ಕೂಡ ಸಮಸ್ಯೆಗೀಡಾಗಿದೆ.
ಜಗತ್ತಿನಾದ್ಯಂತ ಲಕ್ಷಾಂತರ ವಿಂಡೋಸ್‌ ಬಳಕೆದಾರರ ಪರದೆಗಳಲ್ಲಿ ಬ್ಲೂ ಸ್ಕ್ರೀನ್‌ ಆಫ್‌ ಡೆತ್‌ ಕಾಣಿಸಿಕೊಂಡಿದೆ ಹಾಗೂ ಕಂಪ್ಯೂಟರ್‌ಗಳು ಶಟ್‌ಡೌನ್‌ ಆಗಿ ಮರುಆರಂಭಗೊಂಡಿವೆ. ಕೆಲವೆಡೆ ಕಂಪ್ಯೂಟರ್‌ಗಳು ಸತತವಾಗಿ ಮರುಆರಂಭಗೊಳ್ಳುತ್ತಿವೆ.

ಬ್ಲೂ ಸ್ಕ್ರೀನ್‌ ದೋಷಗಳನ್ನು ಬ್ಲ್ಯಾಕ್‌ ಸ್ಕ್ರೀನ್‌ ದೋಷಗಳು ಅಥವಾ STOP ಕೋಡ್‌ ದೋಷಗಳೆಂದು ಕರೆಯಲಾಗುತ್ತದೆ.
ಸಮಸ್ಯೆ ಪರಿಹಾರ ನಿಟ್ಟಿನಲ್ಲಿ ಕ್ರಮಗಳು ಮುಂದುವರಿದಿವೆ ಎಂದು ಮೈಕ್ರೋಸಾಫ್ಟ್‌ ಹೇಳಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version