ಚಾಮರಾಜನಗರದಲ್ಲಿ ಮಹಿಳೆಯರಿಗೆ ಟಿಕೆಟ್ ಕೊಟ್ಟ ಸಚಿವ ವೆಂಕಟೇಶ್

ಚಾಮರಾಜನಗರ: ಕಾಂಗ್ರೆಸ್ ನ ಮಹತ್ವಾಕಾಂಕ್ಷೆಯ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಇಂದು ಚಾಮರಾಜನಗರದಲ್ಲಿ ಚಾಲನೆ ದೊರೆಯಿತು.
ಮಹಿಳೆಯರಿಗೆ ಟಿಕೆಟ್ ಕೊಡುವ ಮೂಲಕ ಉಚಿತ ಬಸ್ ಪ್ರಯಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಚಾಲನೆ ಕೊಟ್ಟರು. ಟಿಕೆಟ್ ಪಡೆಯುತ್ತಿದ್ದ ಮಹಿಳೆಯರು ಸಿದ್ದರಾಮಯ್ಯಗೆ ಜೈ, ಕಾಂಗ್ರೆಸ್ ಪಕ್ಷಕ್ಕೆ ಜೈ ಎಂದು ಘೋಷಣೆ ಕೂಗುತ್ತಾ ಯೋಜನೆ ಜಾರಿಗಾಗಿ ಸಂಭ್ರಮ ಹೊರಹಾಕಿದರು.
ಇನ್ನು, ವೇದಿಕೆ ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್ ಮಾತನಾಡಿ, ಇಂದಿನಿಂದ ಉಚಿತ ಬಸ್ ಪ್ರಯಾಣ ಆರಂಭವಾಗುತ್ತಿದೆ, ಮೈಸೂರಿಗೆ ಹೋಗುವವರು ಚಾಮುಂಡಿ ಬೆಟ್ಟಕ್ಕೆ ಹೋಗಿ, ಅಲ್ಲಿ ದೇವರ ದರ್ಶನ ಪಡೆದು ಒಳ್ಳೆಯಾದಗಲಿ ಎಂದು ಕೇಳಿಕೊಳ್ಳಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ನ ಶಕ್ತಿ ಯೋಜನೆಯಿಂದ ವಾರ್ಷಿಕ 4000 ಕೋಟಿ ಹೊರೆ ಬೀಳಲಿದೆ. ಆದರೆ, ಸಿದ್ದರಾಮಯ್ಯ ಅವರಿಗೆ ಗೊತ್ತಿದೆ ಯಾವ ಮೂಲೆಯಿಂದ ಖಜಾನೆಗೆ ಹಣ ತುಂಬಬೇಕೆಂದು, ವಿರೋಧ ಪಕ್ಷದವರು ಗ್ಯಾರಂಟಿ ಯೋಜನೆ ಸುಳ್ಳು, ಜಾರಿಯಾಗುವುದೇ ಇಲ್ಲಾ ಎಂದು ಹೇಳುತ್ತಿದ್ದರು, ಆದರೆ ಇಂದು ಮೊದಲ ಹೆಜ್ಜೆ ಇಟ್ಟಿದ್ದೇವೆ ಎಂದು ವಿಪಕ್ಷಗಳಿಗೆ ಟಾಂಗ್ ಕೊಟ್ಟರು.
ದೇಶದಲ್ಲೇ ಮಾದರಿ ಸರ್ಕಾರ:
ಗ್ಯಾರಂಟಿ ಯೋಜನೆಯಾದ ಶಕ್ತಿ ಯೋಜನೆಯನ್ನು ಜಾರಿ ಮಾಡುವ ಮೂಲಕ ದೇಶದಲ್ಲೇ ಕರ್ಣಾಟಕ ಮಾದರಿ ಸರ್ಕಾರ ಎನಿಸಿಕೊಂಡಿದೆ. ಸಿದ್ದರಾಮಯ್ಯ ರಾಜ್ಯದಲ್ಲೇ ಆರ್ಥಿಕ ವಿಚಾರದ ಮೇಧಾವಿ ಎನಿಸಿಕೊಂಡಿದ್ದಾರೆ. ನಾವೆಲ್ಲಾ ರೂಪಿಸಿರುವುದು ಬಡವರ ಪರ ಕಾರ್ಯಕ್ರಮವಾಗಿದ್ದು ಮುಂದಿನ ದಿನಗಳಲ್ಲೂ ನಮ್ಮನ್ನು ಬೆಂಬಲಿಸಬೇಕೆಂದು ಕೋರಿದರು.
ಜನವೋ ಜನ– ಮಹಿಳಾ ಜಾತ್ರೆ :
ಇಂದಿನಿಂದ ಉಚಿತ ಬಸ್ ಪ್ರಯಾಣ ಆರಂಭವಾದ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದಲ್ಲಿ ಮಹಿಳಾ ಜಾತ್ರೆ ಕಂಡುಬಂದಿತು. ಬಸ್ ಹತ್ತುವಾಗಲೂ ನೂಕು ನುಗ್ಗಲು ಉಂಟಾಯಿತು. 50% ಪುರುಷರಿಗೆ ಆಸನ ಮೀಸಲಾತಿ ಎಂಬುದನ್ನು ಮಾಡಲು ಸಾಧ್ಯವಿಲ್ಲ ಎಂದು ಕಂಡಕ್ಟರ್ ವೊಬ್ಬರು ಅಳಲು ತೋಡಿಕೊಂಡರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw