ವಿಮಾನ ಪತನದ ಕೊನೆಯ ಕ್ಷಣದಲ್ಲಿ ಪೈಲಟ್ ಹೇಳಿದ ಮಾತು ಏನು? ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗ
ಬಾರಾಮತಿ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಸೇರಿದ ವಿಮಾನ ಪತನಗೊಳ್ಳುವ ಕ್ಷಣಕ್ಕೂ ಮೊದಲು ಕಾಕ್ ಪಿಟ್ ನಲ್ಲಿ ನಡೆದ ಸಂಭಾಷಣೆಯ ಆಘಾತಕಾರಿ ವಿವರಗಳು ಹೊರಬಂದಿವೆ. ವಿಮಾನ ದುರಂತಕ್ಕೀಡಾಗುವ ಕೆಲವೇ ಸೆಕೆಂಡುಗಳ ಮೊದಲು ಪೈಲಟ್ ಗಳು ಆಡಿದ ಕೊನೆಯ ಮಾತು “ಓ ಶಿಟ್” (Oh Shit) ಎಂಬುದಾಗಿತ್ತು ಎಂದು ತನಿಖಾ ಮೂಲಗಳು ತಿಳಿಸಿವೆ.
ಬಾರಾಮತಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸುತ್ತಿದ್ದಾಗ ಪೈಲಟ್ ಗಳು ಏರ್ ಟ್ರಾಫಿಕ್ ಕಂಟ್ರೋಲ್ (ATC) ಜೊತೆ ನಿರಂತರ ಸಂಪರ್ಕದಲ್ಲಿದ್ದರು. ಮೊದಲ ಬಾರಿ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದಾಗ ರನ್–ವೇ ಸ್ಪಷ್ಟವಾಗಿ ಕಾಣದ ಕಾರಣ ಪೈಲಟ್ ಗಳು ‘ಗೋ-ಅರೌಂಡ್’ (ಮತ್ತೆ ಮೇಲೆ ಹಾರುವ ನಿರ್ಧಾರ) ಮಾಡಿದ್ದರು. ಎರಡನೇ ಬಾರಿ ಪ್ರಯತ್ನಿಸಿದಾಗ, ಬೆಳಗ್ಗೆ 8:34ಕ್ಕೆ ರನ್-ವೇ 11ರಲ್ಲಿ ಇಳಿಯಲು ಅನುಮತಿ ನೀಡಲಾಗಿತ್ತು. ಪೈಲಟ್ ಗಳು “ರನ್-ವೇ ಕಾಣಿಸುತ್ತಿದೆ” ಎಂದು ಹೇಳಿದ ಕೆಲವೇ ಕ್ಷಣಗಳಲ್ಲಿ ವಿಮಾನ ನಿಯಂತ್ರಣ ತಪ್ಪಿದೆ.
ದುರಂತದ ಸುಳಿವು: ವಿಮಾನವು ರನ್–ವೇ ತಲುಪುವ ಮೊದಲೇ ಬೆಂಕಿಗೆ ಆಹುತಿಯಾಯಿತು. ಪರಿಸ್ಥಿತಿ ಕೈಮೀರುತ್ತಿದೆ ಮತ್ತು ವಿಮಾನ ಪತನಗೊಳ್ಳುವುದು ಖಚಿತ ಎಂದು ಅರಿವಾದಾಗ ಪೈಲಟ್‌ಗಳು ಗಾಬರಿಯಿಂದ “ಓ ಶಿಟ್” ಎಂದು ಕಿರುಚಿದ್ದಾರೆ, ಇದೇ ಅವರ ಕೊನೆಯ ಧ್ವನಿಯಾಗಿದೆ.
ಪ್ರಸ್ತುತ ಡಿಜಿಸಿಎ (DGCA) ಅಧಿಕಾರಿಗಳು ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದು, ತಾಂತ್ರಿಕ ದೋಷ ಅಥವಾ ಹವಾಮಾನ ವೈಪರೀತ್ಯ ಈ ದುರಂತಕ್ಕೆ ಕಾರಣವೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























