2:38 AM Thursday 16 - October 2025

ಪ್ರಾಂಶುಪಾಲರನ್ನು ಕರೆದು ಕಪಾಳಕ್ಕೆ ಬಾರಿಸಿದ ಜೆಡಿಎಸ್ ಶಾಸಕ!: ಅನಾಗರಿಕ ವರ್ತನೆ ಕಂಡು ಅಧಿಕಾರಿಗಳು ಶಾಕ್

mla m shrinivas
21/06/2022

ಮಂಡ್ಯ: ಕಾಲೇಜು ಪ್ರಾಂಶುಪಾಲರೊಬ್ಬರಿಗೆ ಜೆಡಿಎಸ್ ಶಾಸಕರೊಬ್ಬರು ಕಪಾಳ ಮೋಕ್ಷ ಮಾಡುವ ಮೂಲಕ ಅನಾಗರಿಕತೆ ಮೆರೆದ ಘಟನೆ  ಮಂಡ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಐಟಿಐ ಕಾಲೇಜಿನಲ್ಲಿ ನಡೆದಿದೆ.

ಮಂಡ್ಯ ಜೆಡಿಎಸ್ ಶಾಸಕ ಎಂ.ಶ್ರೀನಿವಾಸ್ ಅವರು, ಜಾಗತಿಕ ಕೈಗಾರಿಕೆ ಯೋಜನೆಯಡಿ ಉನ್ನತ್ತೀಕರಣಗೊಂಡಿದ್ದ ಕಾಲೇಜು ಉದ್ಘಾಟನೆಗೆ ತೆರಳಿದ್ದು, ಈ ವೇಳೆ ಪ್ರಯೋಗಾಲಯದ ಬಗ್ಗೆ ತನಗೆ ಪ್ರಾಂಶುಪಾಲ ನಾಗಾನಂದ್ ಸರಿಯಾದ ಮಾಹಿತಿ ನೀಡಿಲ್ಲ ಎಂದು ಗರಂ ಆಗಿದ್ದಾರೆನ್ನಲಾಗಿದೆ.

ಪ್ರಾಂಶುಪಾಲರನ್ನು ಕರೆದ ಶಾಸಕ ಮೊದಲು ಕಪಾಳಕ್ಕೆ ಹೊಡೆಯುವುದಾಗಿ ಬೆದರಿಸಿದರು. ಆ ಬಳಿಕ ಕಪಾಳಕ್ಕೆ ಬಾರಿಸಿದ್ದಾರೆ. ಹೀಗೆ ಎರಡು ಮೂರು ಬಾರಿ ಪ್ರಾಂಶುಪಾಲರ ಕೆನ್ನೆಗೆ ಕೈ ಬೀಸಿದ್ದು, ಅನಾಗರಿಕ ವರ್ತನೆ ತೋರಿದ್ದಾರೆ.

ಇನ್ನೂ ಶಾಸಕರ ವರ್ತನೆ ಕಂಡು ನಗರ ಸಭಾ ಅಧ್ಯಕ್ಷ ಮಂಜು ಹಾಗೂ ಅಧಿಕಾರಿಗಳು ತಡೆಯಲೂ ಆಗದೇ, ಬುದ್ಧಿವಾದ ಹೇಳಲೂ ಸಾಧ್ಯವಾಗದೇ ಮೂಕಪ್ರೇಕ್ಷಕರಾಗಿದ್ದರು.

ಜನಪ್ರತಿನಿಧಿಗಳು ಯಾವಾಗಲೂ ಜನರಿಗೆ ಮಾದರಿಯಾಗಿರಬೇಕು. ಶಾಸಕರೇ ಪ್ರಾಂಶುಪಾಲರ ಮೇಲೆ ರೌಡಿಯಂತೆ ಹೊಡೆಯುವುದು ನಾಚಿಕೆಗೇಡಿನ ಸಂಗತಿಯಲ್ಲವೇ? ಎನ್ನುವ ಪ್ರಶ್ನೆಗಳಿಗೆ ಕಾರಣವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಗಂಟಲಲ್ಲಿ ದಾಳಿಂಬೆ ಬೀಜ ಸಿಲುಕಿ 10 ತಿಂಗಳ ಮಗುವಿನ ದಾರುಣ ಸಾವು

ಯೋಗ ವ್ಯಕ್ತಿಗಾಗಿ ಮಾತ್ರವಲ್ಲ, ವಿಶ್ವಶಾಂತಿಗಾಗಿ: ಮೈಸೂರಿನಲ್ಲಿ ಪ್ರಧಾನಿ ಮೋದಿ ಮಾತುಗಳು

ಸ್ಯಾನಿಟೈಸರ್ ಕುಡಿಯುವ ಚಟ: ವ್ಯಾಪಾರಿಗಳಿಗೆ ತಲೆನೋವಾದ ಕೆಎಸ್ ಇಬಿ ನೌಕರ

ಆಕ್ಸಿಜನ್ ಕೊಡೋಕೆ ಆಗದವರು ಯೋಗ ಮಾಡಲು ಬಂದಿದ್ದಾರೆ: ಸಿದ್ದರಾಮಯ್ಯ ಟೀಕೆ

ಕಾರು-ಕೆಎಸ್ಸಾರ್ಟಿಸಿ ಬಸ್ ನಡುವೆ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

ಇತ್ತೀಚಿನ ಸುದ್ದಿ

Exit mobile version