12:57 PM Saturday 23 - August 2025

ಮೋದಿ ಸರ್ಕಾರದ ‘ಕಾಪಿ ಪೇಸ್ಟ್’ ಬಜೆಟ್: ರಾಹುಲ್ ಗಾಂಧಿ ವ್ಯಂಗ್ಯ

23/07/2024

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಬಜೆಟನ್ನು ಕುರ್ಚಿ ಉಳಿಸಿಕೊಳ್ಳುವ ಬಜೆಟ್ ಎಂದು ಟೀಕಿಸಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆ ಮತ್ತು ಹಿಂದಿನ ಬಜೆಟ್‌ಗಳನ್ನು ಇಲ್ಲಿ ಕಾಪಿ ಪೇಸ್ಟ್ ಮಾಡಲಾಗಿದೆ ಎಂದು ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್‌ ಪಕ್ಷದ ʼಪೆಹ್ಲಿ ನೌಕ್ರಿ ಪಕ್ಕಿʼ ಯೋಜನೆಯಿಂದ ಬಜೇಟ್‌ ಪ್ರೇರಿತವಾಗಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಹೇಳಿದ್ದಾರೆ.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಬಜೆಟ್‌ ಬಿಜೆಪಿಯ ಮಿತ್ರಪಕ್ಷಗಳು ಮತ್ತು ಆಪ್ತರನ್ನು ಸಮಾಧಾನಪಡಿಸುವ ಗುರಿಯನ್ನು ಹೊಂದಿದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಇತರ ರಾಜ್ಯಗಳ ವೆಚ್ಚದಲ್ಲಿ ಪೊಳ್ಳು ಭರವಸೆಗಳನ್ನು ನೀಡಲಾಗಿದೆ. ತಮ್ಮ ಆಪ್ತರನ್ನು ಸಮಾಧಾನಪಡಿಸಿರುವ ಈ ಬಜೆಟ್ ನಲ್ಲಿ ಸಾಮಾನ್ಯ ಭಾರತೀಯರಿಗೆ ಯಾವುದೇ ಪ್ರಯೋಜನಗಳಿಲ್ಲ ಎಂದು ರಾಹುಲ್‌ ಟೀಕಿಸಿದ್ದಾರೆ.

ಕಾಂಗ್ರೆಸ್‌ ಪಕ್ಷದ ʼಪೆಹ್ಲಿ ನೌಕ್ರಿ ಪಕ್ಕಿʼ ಯೋಜೆಯನ್ನೇ ಆಧರಿಸಿ 1 ಕೋಟಿ ಯುವಜನತೆಗೆ ಇಂಟರ್ನ್‌ಶಿಪ್‌ ಅವಕಾಶ ಒದಗಿಸುವ ಯೋಜನೆಯು ಡಿಪ್ಲೋಮ ಹೊಂದಿರುವವರಿಗೆ ಮತ್ತು ಪದವೀಧರರಿಗೆ ಅನುಕೂಲ ಕಲ್ಪಿಸುವ ಬದಲು ಒಂದು ಕೋಟಿ ಯುವಜನರಿಗೆ ಎಂಬ ಲಕ್ಷ್ಯ ಇರಿಸಿಕೊಳ್ಳಲಾಗಿದೆ,” ಎಂದು ಜೈರಾಂ ರಮೇಶ್‌ ಹೇಳಿದ್ದಾರೆ.

“ಹತ್ತು ವರ್ಷಗಳ ಕಾಲ ನಿರುದ್ಯೋಗದ ಬಗ್ಗೆ ಚಕಾರವೆತ್ತದ ಸರ್ಕಾರ ಕೊನೆಗೂ ಬೃಹತ್‌ ನಿರುದ್ಯೋಗ ರಾಷ್ಟ್ರೀಯ ಬಿಕ್ಕಟ್ಟಾಗಿದೆ ಮತ್ತು ಅದಕ್ಕೆ ತುರ್ತು ಗಮನದ ಅಗತ್ಯವಿದೆ ಎಂಬುದನ್ನು ಒಪ್ಪಿಕೊಂಡಂತಾಗಿದೆ,” ಎಂದು ಇನ್ನೊಂದು ಪೋಸ್ಟ್‌ನಲ್ಲಿ ಜೈರಾಂ ರಮೇಶ್‌ ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version