10:04 AM Wednesday 20 - August 2025

ಮೋದಿ ನಂ.1 ಸುಳ್ಳುಗಾರ: ಮಲ್ಲಿಕಾರ್ಜುನ ಖರ್ಗೆ ತಿರುಗೇಟು

17/12/2024

ಮೋದಿ ತಮ್ಮ ಭಾಷಣದಲ್ಲಿ ‘ಕಾಂಗ್ರೆಸ್‌ ಸಂವಿಧಾನವನ್ನು ಹಿಡಿತದಲ್ಲಿಟ್ಟುಕೊಂಡಿತ್ತು. ನೆಹರೂ, ಇಂದಿರಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದರು’ಎಂದು ಹೇಳಿದ್ದ ಮಾತಿಗೆ, ಇಂದು ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದು ಮೋದಿ ನಂ.1 ಸುಳ್ಳುಗಾರ ಎಂದಿದ್ದಾರೆ. 15 ಲಕ್ಷ ನಿಮ್ಮ ಖಾತೆಗೆ ಹಾಕುತ್ತೇವೆ ಎಂದು ಮೋದಿ ಹೇಳಿದ್ದರು. ಎಲ್ಲಿ ಹೋಯ್ತು ಆ ಭರವಸೆ ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ಮೋದಿ ತಮ್ಮ ಸುಳ್ಳಿನ ಮೂಲಕ ದೇಶದ ಜನರ ಹಾದಿ ತಪ್ಪಿಸುತ್ತಿದ್ದಾರೆ. ಕಳೆದ 11 ವರ್ಷಗಳಲ್ಲಿ ಸಂವಿಧಾನ ಬಲಪಡಿಸಲು ಮೋದಿ ಏನು ಮಾಡಿದರು ಎಂಬುದನ್ನು ಹೇಳಲಿ ಎಂದಿದ್ದಾರೆ. ಇಂದಿರಾ ಗಾಂಧಿಯವರ ಬಾಂಗ್ಲಾದೇಶಕ್ಕೆ ಸ್ವತಂತ್ರ ಕೊಡಿಸಿದರು. ಈಗ ಅಲ್ಲಿ ಅಲ್ಪಸಂಖ್ಯಾತರ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಯಲು ಬಿಜೆಪಿ ನಾಯಕರು ಇಂದಿರಾ ಗಾಂಧಿಯವರನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳಲಿ. ಇಂದಿರಾ ನಿಜವಾಗಿಯೂ ಈ ದೇಶದ ಉಕ್ಕಿನ ಮಹಿಳೆ ಎಂದಿದ್ದಾರೆ.

ಇನ್ನು, ನಿರ್ಮಲಾ ಸೀತಾರಾಮನ್ ವಿರುದ್ಧವೂ ವಾಗ್ದಾಳಿ ನಡೆಸಿದ ಖರ್ಗೆ, ನಿರ್ಮಲಾ ಓದಿದ್ದು ಜವಹರಲಾಲ್ ನೆಹರೂ ಯೂನಿವರ್ಸಿಟಿಯಲ್ಲೇ ಎಂಬುದು ನೆನಪಿರಲಿ ನಾನು ಓದಿದ್ದು ಸರ್ಕಾರಿ ಶಾಲೆಯಲ್ಲಿ ನಾನು ಆಕೆಯಷ್ಟು ಓದಿಲ್ಲದಿರಬಹುದು. ಆಕೆಯಷ್ಟು ಚೆನ್ನಾಗಿ ಹಿಂದಿ, ಇಂಗ್ಲಿಷ್ ಮಾತನಾಡದಿರಬಹುದು. ಆದರೆ ಆಕೆಗೆ ಹಿಂದಿ, ಇಂಗ್ಲಿಷ್ ಎಲ್ಲಾ ಚೆನ್ನಾಗಿ ಗೊತ್ತಿದ್ದರೂ ಉದ್ದೇಶ ಸರಿ ಇಲ್ಲ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version