2:49 PM Wednesday 10 - December 2025

ಪ್ರಧಾನಿ ಮೋದಿಯ ರಾಜೀನಾಮೆ ಕೇಳಿ ಮಾಡಲಾಗಿದ್ದ ಪೋಸ್ಟ್ ಹೈಡ್ ಮಾಡಿದ ಫೇಸ್ ಬುಕ್!

facebook
29/04/2021

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ರಾಜೀನಾಮೆ ಕೇಳಿ ಮಾಡಲಾಗಿದ್ದ ಪೋಸ್ಟ್ ನ್ನು ಫೇಸ್ ಬುಕ್ ಕೆಲ ಸಮಯ ಹೈಡ್ ಮಾಡಿದ್ದು, ಬಳಿಕ ಈ ಬಗ್ಗೆ ಸ್ಪಷ್ಟಣೆ ನೀಡಿದ್ದು, ನಾವು ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿಲ್ಲ ಎಂದು ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಪೋಸ್ಟ್ ಗಳು ಹೈಡ್ ಆಗುತ್ತಿರುವುದು ಇದು ಎರಡನೇ ಬಾರಿಗೆಯಾಗಿದೆ.  ಈ ಹಿಂದೆ ಟ್ವಿಟ್ಟರ್ ನಲ್ಲಿ ಮೋದಿ ಸರ್ಕಾರದ ವಿರುದ್ಧ ಹಾಕಲಾಗಿದ್ದ ಪೋಸ್ಟ್ ಗಳನ್ನು ತೆಗೆದು ಹಾಕಲಾಗಿತ್ತು. ಈ ವೇಳೆ ಪ್ರತಿಕ್ರಿಯೆ ನೀಡಿದ್ದ ಟ್ವಿಟ್ಟರ್, ಸರ್ಕಾರದ ಸೂಚನೆಯ ಮೆರೆಗೆ ನಾವು ಪೋಸ್ಟ್ ಅಳಿಸಿದ್ದೇವೆ ಎಂದು ಹೇಳಿತ್ತು.

ಇದೀಗ ಪ್ರಧಾನಿ ಮೋದಿ ಅವರ ರಾಜೀನಾಮೆ ಕೇಳಿ ಮಾಡಲಾಗಿರುವ  ಪೋಸ್ಟ್ ನ್ನು ಫೇಸ್ ಬುಕ್ ಹೈಡ್ ಮಾಡಿತ್ತು. ನಾವು ನಮ್ಮ ಕಮ್ಯುನಿಟಿ ಸ್ಟ್ಯಾಂಡರ್ಡ್ ಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ  ಭಾರತದಲ್ಲಿ ಮಾತ್ರವೇ ಈ ಪೋಸ್ಟ್ ಹೈಡ್ ಮಾಡಿದ್ದೇವೆ ಎಂದು ಫೇಸ್ ಬುಕ್ ಹೇಳಿತ್ತು. ಆದರೆ, ಯುಎಸ್, ಕೆನಡಾ ಮತ್ತು ಯುಕೆಯಲ್ಲಿ ಕೂಡ ಈ ಪೋಸ್ಟ್ ಗಳು ಕಾಣುತ್ತಿಲ್ಲ ಎನ್ನುವ ದೂರು ಬಂದ ತಕ್ಷಣ ಎಚ್ಚೆತ್ತುಕೊಂಡ ಫೇಸ್ ಬುಕ್ ಹೈಡ್ ಮಾಡಲಾಗಿರುವ ಪೋಸ್ಟ್ ನ್ನು ಮತ್ತೆ ಸರಿಪಡಿಸಿದೆ.

ಕಳೆದ ಚುನಾವಣೆಯ ಸಂದರ್ಭದಲ್ಲಿ ಕೂಡ ಬಿಜೆಪಿಯು ಫೇಸ್ ಬುಕ್ ಸಂಸ್ಥೆಯನ್ನು ಭಾರತದಲ್ಲಿ ಖರೀದಿಸಿದೆ ಎಂಬ ಅನುಮಾನಕ್ಕೆ ಕಾರಣವಾಗಿತ್ತು. ಆ ಬಳಿಕ ಫೇಸ್ ಬುಕ್ ಮುಖ್ಯಸ್ಥ ಮಾರ್ಕ್ ಝುಕರ್ ಬರ್ಗ್ ಈ ಬಗ್ಗೆ ಸ್ಪಷ್ಟಣೆ ನೀಡಿದ್ದರು.

ಇತ್ತೀಚಿನ ಸುದ್ದಿ

Exit mobile version