3:39 PM Wednesday 15 - October 2025

ಪಾಕಿಸ್ತಾನ ಪರ ಘೋಷಣೆ: ಮೊಹರಂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 6 ಯುವಕರ ಬಂಧನ

arrested
20/08/2021

ಭೋಪಾಲ್: ಮೊಹರಂ ಕಾರ್ಯಕ್ರಮದ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಕ್ಕೆ ಸಂಬಂಧಿಸಿದಂತೆ 10 ಯುವಕರ ವಿರುದ್ಧ ದೂರು ದಾಖಲಾಗಿದ್ದು, 6 ಮಂದಿ ಯುವಕರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಮಧ್ಯಪ್ರದೇಶದ ಉಜ್ಜೈನಿಯ ಗೀತಾ ಕಾಲನಿಯಲ್ಲಿ ಈ ಘಟನೆ ನಡೆದಿದ್ದು,  ಮೊಹರಂ ಆಚರಣೆಯ ವೇಳೆ ‘ಪಾಕಿಸ್ತಾನ ಜಿಂದಾಬಾದ್’ ಕೂಗಲಾಗಿದೆ ಎಂದು ವಿಡಿಯೋವೊಂದರ ಆಧಾರದ ಮೇಲೆ ಸ್ಥಳೀಯ ಸಂಘ ಪರಿವಾರ ಮುಖಂಡರು ನೀಡಿರುವ ದೂರಿನ ಆಧಾರದಲ್ಲಿ ಪೊಲೀಸರು 10 ಮಂದಿಯ ವಿರುದ್ಧ ದೇಶದ್ರೋಹದ ಆರೋಪದಲ್ಲಿ ಪ್ರಕರಣ ದಾಖಲಿಸಿ 6 ಮಂದಿಯನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಆರೋಪಿಗಳನ್ನು ಬಂಧಿಸಿರುವುದಕ್ಕೆ ಹಿಂದೂ ದಾರ್ಶನಿಕ ಮತ್ತು ಅವಾಹನ್ ಅಕ್ಷರದ ಮಹಾಮಂಡಳೇಶ್ವರ, ಆಚಾರ್ಯ ಶೇಖರ್ ಅವರು ಸಂತಸ ವ್ಯಕ್ತಪಡಿಸಿದ್ದು, ಸಮಾಜವಿರೋಧಿ ಮತ್ತು ದೇಶವಿರೋಧಿ ಶಕ್ತಿಗಳಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ.

ಇನ್ನಷ್ಟು ಸುದ್ದಿಗಳು…

ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಯುತ್ತಾರಾ ನಳಿನ್ ಕುಮಾರ್ ಕಟೀಲ್?

ಗುಂಪುಗೂಡಬಾರದು ಎನ್ನುತ್ತಲೇ ಬಿಜೆಪಿ ಜನಾಶೀರ್ವಾದ ಜಾತ್ರೆಯ ಬಗ್ಗೆ ಮೌನ ವಹಿಸಿದ ಸಿಎಂ ಬೊಮ್ಮಾಯಿ

ವಿಮಾನದಿಂದ ಬಿದ್ದ ಅಫ್ಘಾನ್ ನ ಇಬ್ಬರು ನಾಗರಿಕರ ಸಾವು ಎಷ್ಟೊಂದು ಭೀಕರವಾಗಿತ್ತು ಗೊತ್ತೆ? | ಸಾವನ್ನು ಕಣ್ಣಾರೆ ಕಂಡವರು ಹೇಳಿದ್ದೇನು?

ಸಲಿಂಗಿ ಯುವತಿಯರಿಗೆ ಜೊತೆಯಾಗಿ ಬದುಕಲು ಅನುಮತಿ ನೀಡಿದ ನ್ಯಾಯಾಲಯ

ಇತ್ತೀಚಿನ ಸುದ್ದಿ

Exit mobile version