10:01 AM Saturday 23 - August 2025

ಮಧ್ಯಪ್ರದೇಶ ಚುನಾವಣೆ: 57 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ಬಿಜೆಪಿ; ಯಾರಿಗೆ ಎಲ್ಲಿ ಸಿಕ್ತು ಟಿಕೆಟ್..?

10/10/2023

ಮಧ್ಯಪ್ರದೇಶದಲ್ಲಿ ಮುಂಬರುವ ಚುನಾವಣೆಗೆ ಬಿಜೆಪಿ 57 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಬುಧ್ನಿ ಕ್ಷೇತ್ರದಿಂದ ಮತ್ತು ರಾಜ್ಯದ ಗೃಹ ಸಚಿವ ನರೋತ್ತಮ್ ಮಿಶ್ರಾ ದಾತಿಯಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಪ್ರಮುಖ ನಾಯಕರಾದ ಗೋಪಾಲ್ ಭಾರ್ಗವ ಅವರು ರೆಹ್ಲಿ ಕ್ಷೇತ್ರದಿಂದ, ವಿಶ್ವಾಸ್ ಸಾರಂಗ್ ನರೇಲಾ ಕ್ಷೇತ್ರದಿಂದ ಮತ್ತು ತುಳಸಿರಾಮ್ ಸಿಲಾವತ್ ಅವರನ್ನು ಸನ್ವರ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಅತೇರ್ ಕ್ಷೇತ್ರದಿಂದ ಡಾ.ಅರವಿಂದ್ ಸಿಂಗ್ ಭದೌರಿಯಾ, ಗ್ವಾಲಿಯರ್ ಗ್ರಾಮೀಣದಿಂದ ಭರತ್ ಸಿಂಗ್ ಕುಶ್ವಾ, ಖುರಯಿ ಕ್ಷೇತ್ರದಿಂದ ಭೂಪೇಂದ್ರ ಸಿಂಗ್, ರೆಹ್ಲಿ ಕ್ಷೇತ್ರದಿಂದ ಗೋಪಾಲ್ ಭಾರ್ಗವ ಮತ್ತು ಇಂದೋರ್ 2 ಕ್ಷೇತ್ರದಿಂದ ರಮೇಶ್ ಮೆಂಡೋಲಾ ಅವರ ಹೆಸರುಗಳು ಪಟ್ಟಿಯಲ್ಲಿವೆ. ಈ ಪಟ್ಟಿಯಲ್ಲಿ ಕೆಲವು ಮಹಿಳಾ ಅಭ್ಯರ್ಥಿಗಳ ಹೆಸರುಗಳೂ ಇವೆ. ಜೈಸಿಂಗ್ ನಗರದಲ್ಲಿ ಮನೀಷಾ ಸಿಂಗ್, ಮನ್ಪುರದಲ್ಲಿ ಮೀನಾ ಸಿಂಗ್ ಮಾಂಡ್ವೆ, ದೇವಾಸ್‌ನಿಂದ ಗಾಯತ್ರಿರಾಜೆ ಪನ್ವಾರ್ ಮತ್ತು ಇಂದೋರ್ ನಿಂದ ಮಾಲಿನಿ ಲಕ್ಷ್ಮಣ್ ಸಿಂಗ್ ಗೌರ್ ಹೆಸರು ಇದೆ‌.

ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಸೋಮವಾರ ಪ್ರಕಟಿಸಿತ್ತು. ಮಧ್ಯಪ್ರದೇಶ ವಿಧಾನಸಭೆಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 17 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.

ಮಧ್ಯಪ್ರದೇಶ ವಿಧಾನಸಭೆಯಲ್ಲಿ 230 ಸ್ಥಾನಗಳಿವೆ. ಪಕ್ಷಾಂತರದ ನಂತರ, ಬಿಜೆಪಿ ಒಟ್ಟು 128 ಸ್ಥಾನಗಳನ್ನು ಹೊಂದಿದ್ದರೆ, ಕಾಂಗ್ರೆಸ್ 98 ಸ್ಥಾನಗಳನ್ನು ಹೊಂದಿದೆ.

ಇತ್ತೀಚಿನ ಸುದ್ದಿ

Exit mobile version