ಸಂಸದೆ ಕಂಗನಾ ರಣಾವತ್ ‘ಗಟರ್ ಮೌತ್, ಡಾಕಿಣಿ’: ರಾಖಿ ಸಾವಂತ್ ಕಿಡಿ

Actress Rakhi Sawant.jpg
29/07/2026

ಮುಂಬೈ: ಜಂತರ್ ಮಂತರ್ ನಲ್ಲಿ ‘ಜೆನ್ ಝಿ’ (Gen Z) ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಅವರಿಗೆ ಬೋಲ್ಡ್ ನಟಿ ರಾಖಿ ಸಾವಂತ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಇತ್ತೀಚೆಗೆ ‘ನೀಟ್’ (NEET) ಪರೀಕ್ಷೆಯ ಅಕ್ರಮಗಳನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ಈ ವೇಳೆ ಪ್ರತಿಭಟನಾಕಾರರು ಅಶ್ಲೀಲ ಭಾಷೆ ಮತ್ತು ವೈಯಕ್ತಿಕ ವೀಡಿಯೊಗಳನ್ನು ಬಳಸಿ ನಿಂದಿಸಿದ್ದಾರೆ ಎಂದು ಕಂಗನಾ ರಣಾವತ್ ಕಿಡಿಕಾರಿದ್ದರು.

ಅಷ್ಟೇ ಅಲ್ಲದೆ, ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪ್ರತಿಭಟನಾಕಾರರನ್ನು ‘ಜಿರಳೆಗಳು’ (cockroaches) ಎಂದು ಕರೆದಿದ್ದ ಕಂಗನಾ, “ಈ ರೀತಿಯ ವೀಡಿಯೊಗಳನ್ನು ನೋಡಿದರೆ ವಾಂತಿ ಬರುತ್ತದೆ” ಎಂದು ಕಟುವಾಗಿ ಟೀಕಿಸಿದ್ದರು.

ಕಂಗನಾ ಅವರ ಈ ಹೇಳಿಕೆಗೆ ಇನ್ ಸ್ಟಾಗ್ರಾಮ್ ವೀಡಿಯೊ ಮೂಲಕ ಆಕ್ರೋಶ ಹೊರಹಾಕಿರುವ ರಾಖಿ ಸಾವಂತ್, ಕಂಗನಾರನ್ನು “ಗಟರ್ ಮೌತ್” (Gutter Mouth) ಹಾಗೂ “ಡಾಕಿಣಿ/ಚಟಾಕಿ” (Witch) ಎಂದು ಕರಿದು ತೀವ್ರವಾಗಿ ನಿಂದಿಸಿದ್ದಾರೆ.
“ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ವಿರುದ್ಧ ಮಾತನಾಡಲು ಕಂಗನಾ ಯಾರು? ಅವರಿಗೆ ಕೆನ್ನೆಗೆ ಹೊಡೆಯಬೇಕೇ?” ಎಂದು ರಾಖಿ ತೀವ್ರ ಭಾಷೆಯಲ್ಲಿ ಪ್ರಶ್ನಿಸಿದ್ದಾರೆ. ರಾಖಿ ಸಾವಂತ್ ಅವರ ಈ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ನೆಟ್ಟಿಗರಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

ಪ್ರಸ್ತುತ ಕಂಗನಾ ಅವರ ‘ಜೆನ್ ಝಿ’ ವಿದ್ಯಾರ್ಥಿಗಳ ಕುರಿತಾದ ಹೇಳಿಕೆ ಹಾಗೂ ಅದಕ್ಕೆ ರಾಖಿ ಸಾವಂತ್ ನೀಡಿರುವ ಈ ಆಕ್ರೋಶಭರಿತ ತಿರುಗೇಟು ಬಾಲಿವುಡ್ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/H1duNIQRfXnJcfQKWPzNqD

 

ಇತ್ತೀಚಿನ ಸುದ್ದಿ

Exit mobile version