ಮೂಡಿಗೆರೆ: ಬಿಜಿಎಸ್ ವಿಎಸ್ ಪಿಯು ಕಾಲೇಜು ತ್ರೋಬಾಲ್ ತಂಡ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ

20/09/2025
ಮೂಡಿಗೆರೆ: ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಕೂಟದಲ್ಲಿ ತ್ರೋಬಾಲ್ ವಿಭಾಗದಲ್ಲಿ ಮೂಡಿಗೆರೆ ಪಟ್ಟಣದ ಬಿಜಿಎಸ್ ವಿಎಸ್ ಪದವಿ ಪೂರ್ವ ಕಾಲೇಜು ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಗಳಿಸಿದೆ. ಇದರೊಂದಿಗೆ ತಂಡವು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ.
ತಂಡದ ನಾಯಕಿ ತನುಶ್ರೀ ಬೆಟ್ಟಗೆರೆ, ಉಪನಾಯಕಿ ತನ್ಸಿಯಾ, ಹಾಗೂ ಆಟಗಾರರಾದ ನೂರೆನ್, ಶ್ರೀಯಾ, ಸಂತೃಪ್ತಿ, ಹೇಮಾ ಸಿಂದೂರ, ಧನ್ಯ, ಕೀರ್ತನ, ಸಾನ್ವಿ, ಜೈಫಾ, ಅಪೇಕ್ಷಾ, ಅನ್ವಿತಾ ತಮ್ಮ ಅದ್ಭುತ ಆಟದಿಂದ ಕ್ರೀಡಾಪಟುಗಳ ಗಮನ ಸೆಳೆದರು.
ತಂಡಕ್ಕೆ ತರಬೇತಿ ನೀಡಿದ ಜೀವನ್ ಹಾಗೂ ಪ್ರಿನ್ಸಿಪಾಲ್ ಸಂದೇಶ ರವರ ಮಾರ್ಗದರ್ಶನದಲ್ಲಿ ಜಯಗಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD