8:38 PM Thursday 4 - September 2025

ಮೂಡಿಗೆರೆ: ವಿವಿಧ ಚರ್ಚುಗಳಲ್ಲಿ ಮಾತೆ ಮರಿಯಮ್ಮನವರ ಹಬ್ಬಕ್ಕೆ ನೋವೆನಾ ಆರಂಭ

novena
04/09/2025

ಕೊಟ್ಟಿಗೆಹಾರ: ಸೆಪ್ಟೆಂಬರ್ 8ರಂದು  ನಡೆಯಲಿರುವ ಮಾತೆ ಮರಿಯಮ್ಣನವರ ಹಬ್ಬ (ಹೊಸಕ್ಕಿ ಹಬ್ಬ)ಕ್ಕೆ ಮೂಡಿಗೆರೆ ತಾಲ್ಲೂಕಿನಾದ್ಯಂತ ವಿವಿಧ ಚರ್ಚುಗಳು ಒಂಬತ್ತು ದಿನಗಳ ನೊವೇನಾ ಪ್ರಾರ್ಥನೆ ಆರಂಭವಾಗಿದೆ.

ಮೂಡಿಗೆರೆ ಸಂತ ಅಂತೋಣಿ ಚರ್ಚ್  ಸೇರಿದಂತೆ ಗೋಣಿಬೀಡಿನ ಕಸ್ಕೇಬೈಲ್, ಬಸ್ಕಲ್, ಬಣಕಲ್, ಕೊಟ್ಟಿಗೆಹಾರ, ಬಾಳೂರು, ಜಾವಳಿ, ಕೆಳಗೂರು, ಹಿರೇಬೈಲ್, ಕೂವೆ ಸೇರಿದಂತೆ ಹಲವೆಡೆ ಬಾಲಿಕ ಮರಿಯ ಪ್ರತಿಮೆಗೆ ಹೂ ಅರ್ಪಣೆ ಮಾಡಿ ವಿಶೇಷ ಪ್ರಾರ್ಥನೆ ಮಾಡುವ ಮೂಲಕ ಶೃದ್ಧಾಭಕ್ತಿ ಅರ್ಪಿಸಲಾಗುತ್ತಿದೆ.

ಆಗಸ್ಟ್ 30ರಿಂದಲೇ ಒಂಬತ್ತು ದಿನಗಳ ಕಾಲ ಮರಿಯಮ್ಮನವರ ಜಯಂತಿ  ಅಂಗವಾಗಿ ಈ ವಿಶೇಷ ನೊವೇನಾ ಆರಂಭಿಸಲಾಗಿದ್ದು ಹಬ್ಬದ ಪರವಾಗಿ ರಸಪ್ರಶ್ನೆಗಳು ಸೇರಿದಂತೆ ವಿವಿಧ ಸ್ಪರ್ಧೆ ಏರ್ಪಡಿಸಿ ಹಬ್ಬದಂದು ಬಹುಮಾನ ನೀಡಲಾಗುತ್ತದೆ ಎಂದು ಕೊಟ್ಟಿಗೆಹಾರ ಸೆಕ್ರೆಡ್ ಹಾರ್ಟ್ ಚರ್ಚಿನ ಧರ್ಮಗುರು ರೆ.ಫಾ.ವಿಲಿಯಂ ಬರ್ನಾರ್ಡ್ ತಿಳಿಸಿದ್ದಾರೆ.

ವಿವಿಧ ಚರ್ಚುಗಳಲ್ಲಿ ಮಕ್ಕಳು ಸೇರಿದಂತೆ ಕ್ರೈಸ್ತ ಭಕ್ತಾದಿಗಳು ಹೆಚ್ಚಾಗಿ ಸಮಾವೇಶಗೊಂಡು ತಟ್ಟೆಯಲ್ಲಿ ವಿವಿಧ ಹೂಗಳನ್ನು ತಂದು ಬಾಲಿಕ ಮರಿಯಗೆ ಅರ್ಪಿಸಿ ನೋವೆನಾ ಪ್ರಾರ್ಥನೆಯಲ್ಲಿ ಭಾಗವಹಿಸುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version