ಗ್ಯಾಂಗ್ ಸ್ಟಾರ್ ಮುಖ್ತಾರ್ ಅನ್ಸಾರಿ ಸಾವು: ‘ಇಂದು ನಮಗೆ ಹೋಳಿ’ ಎಂದ ಬಿಜೆಪಿ ಮುಖಂಡ ಕೃಷ್ಣಾನಂದ ರೈ ಪತ್ನಿ

29/03/2024

ಭೂಗತ ಪಾತಕಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು. ಹೀಗಾಗಿ ಉತ್ತರ ಪ್ರದೇಶ ಸರ್ಕಾರವು ರಾಜ್ಯಾದ್ಯಂತ ಸೆಕ್ಷನ್ 144 ಅನ್ನು ವಿಧಿಸಿದ್ದು, ಮೌ, ಬಾಂಡಾ, ಗಾಜಿಪುರ, ಬಾಲಿಯಾ ಮತ್ತು ಪ್ರಯಾಗ್ರಾಜ್ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅನ್ಸಾರಿ ಅವರ ಆರೋಗ್ಯ ಹದಗೆಟ್ಟ ನಂತರ ಅವರನ್ನು ಬಾಂಡಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆತರಲಾಯಿತು. ಅನ್ಸಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಅನ್ಸಾರಿ ಅವರ ಸಾವನ್ನು ದೃಢಪಡಿಸಿ ಜಿಲ್ಲಾ ಆಸ್ಪತ್ರೆ ಹೇಳಿಕೆ ಬಿಡುಗಡೆ ಮಾಡಿದೆ. “63 ವರ್ಷದ ಸುಭಾನಲ್ಲಾ ಅವರ ಪುತ್ರ ಮುಖ್ತಾರ್ ಅನ್ಸಾರಿಯನ್ನು ವಾಂತಿ ಮತ್ತು ಪ್ರಜ್ಞಾಹೀನತೆಯ ದೂರಿನ ನಂತರ ಜೈಲು ಅಧಿಕಾರಿಗಳು ರಾತ್ರಿ 8.25 ಕ್ಕೆ ಬಾಂಡಾದ ರಾಣಿ ದುರ್ಗಾವತಿ ವೈದ್ಯಕೀಯ ಕಾಲೇಜಿನ ತುರ್ತು ವಾರ್ಡ್ಗೆ ದಾಖಲಿಸಿದ್ದಾರೆ. ರೋಗಿಗೆ ಒಂಬತ್ತು ವೈದ್ಯರ ತಂಡವು ಚಿಕಿತ್ಸೆ ನೀಡಿತು. ಆದಾಗ್ಯೂ, ಪ್ರಯತ್ನಗಳ ಹೊರತಾಗಿಯೂ, ರೋಗಿಯು ಹೃದಯ ಸ್ತಂಭನದಿಂದಾಗಿ ನಿಧನರಾದರು” ಎಂದು ಆಸ್ಪತ್ರೆ ತಿಳಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಮಾಜಿ ಶಾಸಕ ಕೃಷ್ಣಾನಂದ ರೈ ಅವರ ಪತ್ನಿ ಅಲ್ಕಾ ರೈ, “ನಾನು ಏನು ಹೇಳಲಿ? ಇದು ಸರ್ವಶಕ್ತನ ಆಶೀರ್ವಾದ. ನ್ಯಾಯಕ್ಕಾಗಿ ನಾನು ಪ್ರಾರ್ಥಿಸುತ್ತಿದ್ದೆ ಮತ್ತು ಇಂದು ನ್ಯಾಯ ಸಿಕ್ಕಿದೆ. ನಾವು ಎಂದಿಗೂ ಹೋಳಿ ಆಚರಿಸಲಿಲ್ಲ. ಇಂದು ನಮಗೆ ಹೋಳಿ ಆಚರಿಸಿದಂತಾಗಿದೆ’ ಎಂದಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version