12:40 AM Tuesday 14 - October 2025

ಮುಸ್ಲಿಮ್ ಯುವಕರ ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿ, ಹಲ್ಲೆ ನಡೆಸಿದ ನಾಲ್ವರು ದುಷ್ಕರ್ಮಿಗಳು | ಬೈಕ್, ಪರ್ಸ್ ದೋಚಿ ಪರಾರಿ!

28/02/2021

ಕೊಚ್ಚಿ: ಇಬ್ಬರು ಮುಸ್ಲಿಮ್ ಯುವರ ಮೇಲೆ ಗುಂಪೊಂದು ಪೆಪ್ಪರ್ ಸ್ಪ್ರೇ ಮಾಡಿ ಅಮಾನವೀಯವಾಗಿ ಥಳಿಸಿ ಬೈಕ್ ಹಾಗೂ ಪರ್ಸ್, ಮೊಬೈಲ್ ಮತ್ತಿತರ ವಸ್ತುಗಳನ್ನು ದೋಚಿದ ಘಟನೆ ಕೇರಳದ ಕೊಚ್ಚಿಯ ಕಲೂರಿನ ರಿಸರ್ವ್ ಬ್ಯಾಂಕ್ ಬಳಿ ನಡೆದಿದೆ.

ಆನ್ ಲೈನ್ ಆಹಾರ ವಿತರಕ ಸಂಸ್ಥೆಯ ಉದ್ಯೋಗಿ ಅಸ್ಲಂ ಹಾಗೂ ಅವರ ಸ್ನೇಹಿತ ಅಬ್ದುಲ್ ನಾಸರ್ ಸಂತ್ರಸ್ತ ಯುವಕರಾಗಿದ್ದಾರೆ. ಇನ್ನೆರಡು ಬೈಕ್ ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ.

ವ್ಯಕ್ತಿಯೊಬ್ಬ ಬೈಕ್ ನಲ್ಲಿ ಬಂದು ಆರಂಭದಲ್ಲಿ ಇವರ ಬಳಿ ಮಾತನಾಡುತ್ತಿದ್ದ ಎಂದು ತಿಳಿದು ಬಂದಿದೆ. ಬೈಕ್ ನಿಲ್ಲಿಸಿ ವ್ಯಕ್ತಿಯೊಂದಿಗೆ ಸಂತ್ರಸ್ತ ಯುವಕರು ಮಾತನಾಡುತ್ತಿರುವಾಗಲೇ ನಾಲ್ವರು ದುಷ್ಕರ್ಮಿಗಳು ಇವರ ಮೇಲೆ ದಾಳಿ ನಡೆಸಿದ್ದಾರೆ.

ಈ ಘಟನೆಯ ದೃಶ್ಯಾವಳಿಗಳು ರಿಸರ್ವ್ ಬ್ಯಾಂಕ್ ನ ಸಿಸಿ ಟಿವಿ ಕ್ಯಾಮೆರಾದಲ್ಲಿ  ಸೆರೆಯಾಗಿರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.  ಇಂದು ಬ್ಯಾಂಕ್ ಗೆ ರಜಾ ದಿನವಾಗಿರುವುದರಿಂದ ನಾಳೆ ಸಿಸಿ ಕ್ಯಾಮರ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುವ ಸಾಧ್ಯತೆಗಳಿವೆ.

ಇತ್ತೀಚಿನ ಸುದ್ದಿ

Exit mobile version