1:31 AM Wednesday 15 - October 2025

ನನ್ನ ಕೆಲಸ ಬೆಣ್ಣೆ ಹಚ್ಚುವುದಲ್ಲ: ರವಿಚಂದ್ರನ್ ಅಶ್ವಿನ್ ಗೆ ರವಿಶಾಸ್ತ್ರಿ ತಿರುಗೇಟು

ravi shastri
24/12/2021

ಮುಂಬೈ: 2019ರ ಸಿಡ್ನಿ ಟೆಸ್ಟ್‌ನಲ್ಲಿ ತಮ್ಮನ್ನು ಆಡುವ ಬಳಗದಿಂದ ಹೊರಗಿಟ್ಟು ಕುಲದೀಪ್ ಯಾದವ್‌ ರನ್ನು ಹೊಗಳಿದ್ದಕ್ಕೆ ತನಗೆ ನೋವಾಗಿತ್ತು ಎಂದು ಹೇಳಿಕೆ ನೀಡಿದ್ದ ರವಿಚಂದ್ರನ್ ಅಶ್ವಿನ್‌ ಗೆ ಮಾಜಿ ಕೋಚ್ ರವಿಶಾಸ್ತ್ರಿ ತಿರುಗೇಟು ನೀಡಿದ್ದಾರೆ.

ನನ್ನ ಎದುರೇ ಕುಲದೀಪ್ ಯಾದವ್ ವಿದೇಶದಲ್ಲಿ ಭಾರತದ ನಂ.1 ಸ್ಪಿನ್ನರ್ ಎಂದಾಗ ನನಗೆ ಆಘಾತವಾಗಿತ್ತು. ನನ್ನನ್ನು ಯಾರೂ ಬೆಂಬಲಿಸುತ್ತಿಲ್ಲ ಎನಿಸಿತು ಎಂದು ರವಿಶಾಸ್ತ್ರಿ ವಿರುದ್ಧ ಇತ್ತೀಚೆಗೆ ರವಿಚಂದ್ರನ್ ಅಶ್ವಿನ್‌ ಅಸಮಾಧಾನ ಹೊರಹಾಕಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ರವಿಶಾಸ್ತ್ರಿ ಒಂದು ವೇಳೆ ನನ್ನ ಹೇಳಿಕೆಯಿಂದ ಅಶ್ವಿನ್‌ ಗೆ ಅಂದು ನೋವಾಗಿದ್ದರೆ ನನಗೆ ಸಂತೋಷ. ನನ್ನ ಕೆಲಸ ಬೆಣ್ಣೆ ಹಚ್ಚುವುದು ಮಾತ್ರವಾಗಿರಲಿಲ್ಲ. ಆವತ್ತು ಕುಲದೀಪ್ ಯಾದವ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದರು. ಹೀಗಾಗಿ ಅವರಿಗೆ ಅವಕಾಶ ಕೊಡಲಾಯಿತು. ಒಬ್ಬ ಕೋಚ್ ನಿಮ್ಮ ಬಗ್ಗೆ ಏನಾದರೂ ಹೇಳಿದರೆ ಮನೆಗೆ ಹೋಗಿ ಅಳುತ್ತಾ ಕೂರಬೇಕೇ? ಅದನ್ನು ತಪ್ಪು ಎಂದು ಪ್ರೂವ್ ಮಾಡಲು ನೀವು ಸಾಧಿಸಿ ತೋರಿಸಬೇಕು ಎಂದು ಅಶ್ವಿನ್‌ಗೆ ಕುಟುಕಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕೊವಿಡ್ ಸೋಂಕಿಗೊಳಗಾದ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಮತ್ತು ಚಲನಶೀಲತೆ  ಕುಸಿತ!

ಫುಡ್​ ಡೆಲಿವರಿ ವಿಳಂಬ: ಡೆಲಿವರಿ ಬಾಯ್​ ಕುತ್ತಿಗೆ ಹಿಡಿದು ಹೊರದಬ್ಬಿದ ಮಹಿಳೆ

ಜಮ್ಮು-ಕಾಶ್ಮೀರದ ಅನಂತ್‌ ನಾಗ್‌ನಲ್ಲಿ ಎನ್‌ ಕೌಂಟರ್: ಓರ್ವ ಉಗ್ರನ ಹತ್ಯೆ

ಮೀನುಗಾರನನ್ನು ತಲೆಕೆಳಗಾಗಿ ನೇತು ಹಾಕಿ ಹಲ್ಲೆ: ಆರು ಮಂದಿ ಆರೋಪಿಗಳು ಅರೆಸ್ಟ್

ಮತಾಂತರ ನಿಷೇಧ: ತಿದ್ದ ಬೇಕಿರುವುದು ಜಾತಿ ಅಸಮಾನತೆಯನ್ನು, ಸಂವಿಧಾನವನ್ನಲ್ಲ!

ಇತ್ತೀಚಿನ ಸುದ್ದಿ

Exit mobile version