12:40 PM Thursday 21 - August 2025

ಮೈಸೂರಿನಲ್ಲಿ ಭೂ ಮಾಫಿಯಾ: ದಾಖಲೆ ಬಿಡುಗಡೆ ಮಾಡಿದ ರೋಹಿಣಿ ಸಿಂಧೂರಿ

rohini sindhuri
10/06/2021

ಮೈಸೂರು: ಮೈಸೂರು ನಗರ ಹಾಗೂ ಲಿಂಗಾಂಬುದಿ ಕೆರೆಯ ಸುತ್ತಮುತ್ತ ನಡೆದ ಭೂ ಮಾಫಿಯಾದ ವಿರುದ್ಧ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಲು ಮುಂದಾಗಿರುದು ನನ್ನ ವರ್ಗಾವಣೆಗೆ ಕಾರಣ ಎಂದು ಹೇಳಿರುವ ಮೈಸೂರಿನ ಮಾಜಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಮೈಸೂರಿನಲ್ಲಿರುವ ಸಾರಾ ಕಲ್ಯಾಣ ಮಂಟಪ ರಾಜಕಾಲುವೆ ಮೇಲೆ ನಿರ್ಮಾಣವಾಗಿದೆ. ಈ ಕುರಿತು ಸರ್ವೆ ಕೂಡ ನಡೆದಿದೆ. ಇದೇ ರೀತಿಯ ಭೂ ಹಗರಣಕ್ಕೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದೆ. ಈ ಹಿನ್ನೆಲೆಯಲ್ಲಿ ನನ್ನ ವರ್ಗಾವಣೆಗೆ ಪಿತೂರಿ ನಡೆಯಿತು ಎಂದು ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.

ನಾನು ಭೂ ಹಗರಣದ ಕುರಿತು ತನಿಖೆ ನಡೆಸದಂತೆ ಮಾಡಲು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಕೊನೆಗೆ ನನ್ನ ವಿರುದ್ಧವೇ ಆರೋಪ ಮಾಡುತ್ತಿದ್ದಾರೆ. ನಾನು ಯಾವುದೇ ಬೆದರಿಕೆಗೆ ಮಣಿಯುವುದಿಲ್ಲ. ಮುಂದೊಂದು ದಿನ ನನ್ನ ಪ್ರಯತ್ನಕ್ಕೆ ಫಲ ದೊರೆಯುವ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.

ವರ್ಗಾವಣೆಗೆ ಎರಡು ದಿನ ಮುನ್ನ ರೋಹಿಣಿ ಸಿಂಧೂರಿ ಭೂ ಹಗರಣ ಆರೋಪದ ಕುರಿತು ಕೆಲವೊಂದು ಆದೇಶಗಳನ್ನು ಹೊರಡಿಸಿರುವುದು ಇದೀಗ ಬೆಳಕಿಗೆ ಬಂದಿದೆ ಎಂದು ವರದಿಗಳಿಂದ ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ

Exit mobile version