10:57 AM Saturday 15 - August 2026

ರೋಹಿಣಿ ಸಿಂಧೂರಿ ಹೇಳಿಕೆ ವಿರುದ್ಧ ಸಾ.ರಾ.ಮಹೇಶ್ ಗರಂ | ನಿರ್ಗಮಿತ ಡಿಸಿಗೆ ಸವಾಲು

sa ra mahesh
10/06/2021

ಮೈಸೂರು:  ಶಾಸಕ ಸಾ.ರಾ.ಮಹೇಶ್ ರಾಜಕಾಲುವೆ ಮೇಲೆ ಕಲ್ಯಾಣಮಂಟಪ ನಿರ್ಮಿಸಿದ್ದಾರೆ ಎಂದು ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆರೋಪಿಸಿದ್ದು, ಈ ಆರೋಪವನ್ನು ಸಾ.ರಾ.ಮಹೇಶ್ ತಳ್ಳಿ ಹಾಕಿದ್ದಾರೆ.

ಈ ಆರೋಪದ ವಿರುದ್ಧ ಸಾರಾ ಮಹೇಶ್​ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಏಕಾಂಗಿ ಹೋರಾಟ ನಡೆಸುತ್ತಿದ್ದು,  ನನ್ನ ಒಡೆತನದ ಸಾರಾ ಚೌಲ್ಟ್ರಿ ರಾಜಕಾಲುವೆ ಮೇಲೆ ನಿರ್ಮಾಣವಾಗಿಲ್ಲ. ಬೇಕಿದ್ದರೆ ಉನ್ನತ ಮಟ್ಟದ ಅಧಿಕಾರಿಗಳು ಬಂದು ಸರ್ವೇ ಮಾಡಲಿ ಎಂದು ಅವರು ಹೇಳಿದ್ದಾರೆ.

ರಾಜಕಾಲುವೆ ಮೇಲೆ ಚೌಲ್ಟ್ರಿ ನಿರ್ಮಾಣವಾಗಿದೆ ಅನ್ನೋದು ಸಾಬೀತಾದಲ್ಲಿ ಅದನ್ನ ಸಾರ್ವಜನಿಕರ ಬಳಕೆಗೆಂದು ರಾಜ್ಯಪಾಲರಿಗೆ ಹಸ್ತಾಂತರ ಮಾಡುತ್ತೇನೆ. ಅಲ್ಲದೆ ಸಾರ್ವಜನಿಕ ಜೀವನದಿಂದಲೇ ನಾನು ನಿವೃತ್ತಿ ಪಡೆಯುತ್ತೇನೆ ಎಂದು ಮಹೇಶ್ ಹೇಳಿದ್ದಾರೆ.

ಒಂದು ವೇಳೆ ರೋಹಿಣಿ ಸಿಂಧೂರಿ ಮಾಡಿದ ಆರೋಪ ಸುಳ್ಳಾದಲ್ಲಿ ಅವರನ್ನ ಐಎಎಸ್​ ಹುದ್ದೆಯಿಂದ ಅಮಾನತು ಮಾಡಬೇಕು ಎಂದು ಸಾ.ರಾ. ಮಹೇಶ್​ ಸವಾಲು ಹಾಕಿದ್ದಾರೆ.

ಇತ್ತೀಚಿನ ಸುದ್ದಿ

Exit mobile version