4:36 AM Wednesday 22 - October 2025

ಕಾಡು ಹಂದಿಗೆ ಇಟ್ಟಿದ್ದ ನಾಡ ಬಾಂಬ್ ತಿಂದ ಹಸುವಿನ ಬಾಯಿ ಛಿದ್ರ ಛಿದ್ರ!

07/02/2021

ಕೋಲಾರ: ಕಾಡು ಹಂದಿಯ ಬೇಟೆಗಾಗಿ ಇಟ್ಟಿದ್ದ ನಾಡಬಾಂಬ್ ನ್ನು ಹಸುವೊಂದು ತಿಂದಿದ್ದು, ಪರಿಣಾಮವಾಗಿ ಹಸುವಿನ ಬಾಯಿ ಛಿದ್ರಗೊಂಡು ಹಸು ಸಾವನ್ನಪ್ಪಿದ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರ ಜಿಲ್ಲೆಯ ಬಂಗಾರ ಪೇಟೆ ತಾಲೂಕಿನ ಹೊಸೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು,  ಹಸುವು ಮೇಯಲು ಹೋಗಿದ್ದ ಸಂದರ್ಭದಲ್ಲಿ ಕಾಡು ಹಂದಿಗಾಗಿ ಇಡಲಾಗಿದೆ ಎನ್ನಲಾದ ಸ್ಫೋಟಕ ವಸ್ತುವನ್ನು ತಿಂದಿದೆ. ವೇಳೆ ಸ್ಫೋಟಕ ಬಾಯಿಯಲ್ಲಿಯೇ ಸ್ಫೋಟಗೊಂಡಿದ್ದು, ಹಸುವು ನರಳಿ ನರಳಿ ಸ್ಥಳದಲ್ಲಿ ಅಮಾನವೀಯವಾಗಿ ಸಾವನ್ನಪ್ಪಿದೆ.

ಈ ಹಸು ಶ್ರೀನಿವಾಸ್ ಎಂಬವರಿಗೆ ಸೇರಿದ್ದಾಗಿದೆ ಎಂದು ತಿಳಿದು ಬಂದಿದೆ. ಹಸುವು ಹುಲ್ಲಿನೊಂದಿಗೆ ನಾಡಬಾಂಬ್ ನ್ನು ತಿಂದಿದೆ ಎಂದು ಹೇಳಲಾಗಿದೆ. ಈ ಹಸುವಿನ ಮೌಲ್ಯ ಸುಮಾರು 1 ಲಕ್ಷ ಆಗಿದ್ದು, ಇದೀಗ ತಮ್ಮ ಹಸುವನ್ನು ಕಳೆದುಕೊಂಡು ಮಾಲಕ ಕಂಗಾಲಾಗಿದ್ದಾರೆ.

ಘಟನೆ ಸಂಬಂಧ ಅರಣ್ಯ  ಇಲಾಖೆಗೆ ದೂರು ನೀಡಲಾಗಿದ್ದು,  ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಂಗಾರಪೇಟೆ ಪೊಲೀಸರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ

Exit mobile version