11:15 PM Tuesday 14 - October 2025

ನಾಳೆ ಪೊಸರುಗುಡ್ಡೆ ಮಿಯ್ಯಾರು ಶ್ರೀ ಸತ್ಯಸಾರಮಾನಿ ದೈವಸ್ಥಾನದ ವಾರ್ಷಿಕ ನೇಮೋತ್ಸವ

sathya saramani
22/03/2022

ಕಾರ್ಕಳ: ಸಮೀಪದ ಪೊಸರುಗುಡ್ಡೆ ಮಿಯ್ಯಾರು ಇಲ್ಲಿನ ಬ್ರಹ್ಮಶ್ರೀ ಸತ್ಯಸಾರಮಾನಿ, ಹಲೇರ ಪಂಜುರ್ಲಿ ಮತ್ತು ಚಾಮುಂಡಿ ಗುಳಿಗ ದೈವಸ್ಥಾನದ 23ನೇ ವರ್ಷದ ವಾರ್ಷಿಕ ನೇಮೋತ್ಸವ ಮಾ. 23ರಂದು ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಸಾಯಂಕಾಲ, 4ಗಂಟೆಗೆ ಶ್ರೀ ಸತ್ಯಸಾರಮಾನಿ, ಹಲೇರ ಪಂಜುರ್ಲಿ ಮತ್ತು ಚೌಂಡಿ ಗುಳಿಗ ದೈವಗಳ ಶುದ್ಧಿಕರಣ, ಮಹಾಪೂಜೆ ನಡೆಯಲಿದೆ. ರಾತ್ರಿ 7 ಗಂಟೆಗೆ ದೈವಗಳ ಭಂಡಾರ ಆರೋಹಣ, 8ರಿಂದ ಅನ್ನಸಂತರ್ಪಣೆ ನಡೆಯಲಿದೆ.

10.30ರಿಂದ ಶ್ರೀ ಸತ್ಯಸಾರಮಾನಿ ದೈವಗಳ ಪಾತ್ರಿದರ್ಶನ, ರಾತ್ರಿ 12 ಗಂಟೆಗೆ ಹಲೇರ ಪಂಜುರ್ಲಿ ದೈವದ ಗಗ್ಗರ ಸೇವೆ ಹಾಗೂ ಬೆಳಗ್ಗೆ 6ರಿಂದ ಚಾಮುಂಡಿ ಗುಳಿಗ ದೈವದ ಗಗ್ಗರ ಸೇವೆ ನಡೆಯಲಿದೆ.

ಭಕ್ತಾಭಿಮಾನಿಗಳು ನೇಮೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಿರಿಮುಡಿ ಗಂಧ-ಪ್ರಸಾದ ಸ್ವೀಕರಿಸಿ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಸಮಿತಿಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹಿಜಾಬ್ ತೀರ್ಪು: ಬಂದ್ ಕರೆ ನೀಡಿದವರ ವಿರುದ್ದ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಳ್ಳಲು ಅರ್ಜಿ ಸಲ್ಲಿಕೆ

ಆಘಾತಕಾರಿ ಘಟನೆ: 2 ತಿಂಗಳ ಹೆಣ್ಣು ಮಗುವನ್ನು ಕೊಲೆಗೈದು ಒಲೆಗೆಸೆದ ತಾಯಿ

ಮತ್ತೆ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 50 ರೂ. ಏರಿಕೆ

ಬಿಗ್‌ ಶಾಕ್‌: ಭಾರೀ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ಬೆಲೆ

ಇತ್ತೀಚಿನ ಸುದ್ದಿ

Exit mobile version