7:41 PM Wednesday 10 - December 2025

“ನಳಿನ್ ಕುಮಾರ್ ಕಟೀಲ್ ರಾಸಲೀಲೆ ಬಗ್ಗೆ ಕರಾವಳಿ ಜನ ಮಾತನಾಡಿಕೊಳ್ಳುತ್ತಿದ್ದಾರೆ”

naleen kumar kateel
16/04/2021

ಮಂಗಳೂರು: ನಳಿನ್ ಕುಮಾರ್ ಕಟೀಲ್ ಅವರ ರಾಸಲೀಲೆಯ ಬಗ್ಗೆ  ಕರಾವಳಿ ಭಾಗದ ಜನರು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದ್ದು,  ನೀವು ತಲೆ ಹಿಡಿದ ಪಟ್ಟಿ ದೊಡ್ಡದಿದೆಯಲ್ಲವೇ? ಎಂದು ತಿರುಗೇಟು ನೀಡಿದೆ.

ಉಪ ಚುನಾವಣೆಯ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಕಾಂಗ್ರೆಸ್ ನಡುವಿನ ವಾಕ್ಸಮರ ಮುಂದುವರಿದಿದ್ದು, ಕಾಂಗ್ರೆಸ್ ವೊಂದು ತಲೆಹಿಡುಕ ಪಕ್ಷವಾಗಿದೆ ಎಂದು ಕಟೀಲ್ ಹೇಳಿಕೆ ನೀಡಿದ್ದು, ಇದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಕರಾವಳಿ ಭಾಗದಲ್ಲಿದಲ್ಲಿ ಚಾಲ್ತಿಯಲ್ಲಿರುವ ನಳಿನ್ ಕುಮಾರ್ ಕಟೀಲ್ ಅವರ ಕಥೆಗಳನ್ನು ರಾಜ್ಯ ಕಾಂಗ್ರೆಸ್ ಕೆದಕಿದೆ.

ಬಿಜೆಪಿ ಪಕ್ಷ ತಲೆಹಿಡುಕರ ಅಡ್ಡೆಯಾಗಿದೆ ಎಂದು ಈ ಹಿಂದೆಯೇ ಹೇಳಿದ್ದೆವು, ಆ ಸಾಧನೆಯಲ್ಲಿ ಕಟೀಲ್ ಆವರ ಕೊಡುಗೆ ದೊಡ್ಡದಿದೆ. ಕರಾವಳಿ ಭಾಗದ ಜನ ಇವರ ಲೀಲೆಗಳ ಬಣ್ಣನೆ, ವರ್ಣನೆಯನ್ನು ಬಹಳ ಚೆನ್ನಾಗಿ ಮಾಡುತ್ತಾರೆ. ಕಟೀಲ್  ಅವರೇ ಬಹಳ ಹಿಂದೆ ನಿಮ್ಮದೂ ಒಂದು ಸಿಡಿ ಸದ್ದು ಮಾಡಿತ್ತಲ್ಲ, ಏನದು ನೀವು ಹೇಳುವಿರಾ, ನಾವೇ ಹೇಳಬೇಕೆ?! ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ನಿಶಿತಾ ಪೂಜಾರಿಯಿಂದ ಹಿಡಿದು ಕರಾವಳಿಯ ಎಷ್ಟು ಹೆಣ್ಣು ಮಕ್ಕಳನ್ನು ಕಾಡಿದ್ದೀರಿ ಹೇಳುವಿರಾ?” ಎಂದು ಕೆಪಿಸಿಸಿ, ನಳಿನ್ ಕಟೀಲ್ ಅವರನ್ನು ಪ್ರಶ್ನಿಸಿದೆ. ಈ ಬಗ್ಗೆ ಸಿದ್ದರಾಮಯ್ಯನವರು ಕೂಡ ಹೇಳಿಕೆ ನೀಡಿದ್ದರು, ಈ ಹಿಂದೆ ಕೂಡಾ, “ಎಲ್ಲೆಲ್ಲೋ ಹೋಗಿ ಬಟ್ಟೆಬಿಚ್ಚಿ ಮರ್ಯಾದೆ ಕಳೆಯುತ್ತಿರುವ ನಳಿನ್ ಕುಮಾರ್ ಕಟೀಲ್ ಗೆ ಕೂಡ ಒಂದೆರಡು ಜೊತೆ ಬಟ್ಟೆ ದಾನ ಮಾಡ್ತೀನಿ. ಇನ್ನೂ 19 ಸಿಡಿ ಇದೆಯಂತೆ, ಎಲ್ಲವೂ ಹಿಡಿತದಲ್ಲಿರಲಿ, ನಾಲಗೆ ಕೂಡಾ ಎಂದು ಸಿದ್ದರಾಮಯ್ಯ ಸೈಲೆಂಟಾಗಿ ವಾರ್ನಿಂಗ್ ಮಾಡಿದ್ದರು.

ಇತ್ತೀಚಿನ ಸುದ್ದಿ

Exit mobile version