3:04 AM Wednesday 10 - September 2025

ನನ್ನ ಗಂಡನಿಗೆ ಆದ ರೀತಿ ಯಾರಿಗೂ ಆಗಬಾರದು: ಪ್ರವೀಣ್ ಪತ್ನಿ ನೂತನ ಕಣ್ಣೀರು

praveen nettaru
27/07/2022

ಬೆಳ್ಳಾರೆ: ನನ್ನ ಪತಿಯು ಹಗಲುರಾತ್ರಿ ಸಮಾಜಕ್ಕಾಗಿ ದುಡಿಯುತ್ತಿದ್ದರು. ಎಷ್ಟೊತ್ತಿಗೆ ಯಾರು ಕರೆದರೂ ಹೋಗುತ್ತಿದ್ದರು. ನಾನು ಬೇಡ ಅಂದ್ರೂ, ಅವರ ಅಪ್ಪ ಅಮ್ಮ ಬೇಡ ಅಂದ್ರೂ ಕೇಳುತ್ತಿರಲಿಲ್ಲ.ಇವತ್ತು ಅವರನ್ನು ಕಳೆದುಕೊಂಡಿದ್ದೇನೆ. ನನಗೆ ಅವರನ್ನು ಕೊಡುವವರು ಯಾರು?  ಎಂದು ದುಷ್ಕರ್ಮಿಗಳಿಂದ ಹತ್ಯೆಯಾದ ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನ ಕಣ್ಣೀರು ಹಾಕಿದ್ದಾರೆ.

ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ನೂತನ, ನನ್ನ ಗಂಡ ಸಮಾಜಕ್ಕೆ ಏನೆಲ್ಲಾ ಮಾಡಿದರು ಆದರೆ ಅವರಿಗೆ ಸಮಾಜ ಏನೂ ಮಾಡಲಿಲ್ಲ. ನನ್ನ ಗಂಡನ ಜೀವ ಉಳಿಸಲು ಯಾರಿಂದಲೂ ಆಗಲಿಲ್ಲ ಎಂದು ಮರುಗಿದ್ದಾರೆ.

ನನ್ನ ಪತಿಯಂತೆಯೇ ಎಷ್ಟೋ ಮಹಿಳೆಯರ ಗಂಡಂದಿರು ಸಮಾಜಕ್ಕಾಗಿ ದುಡಿಯುತ್ತಿದ್ದಾರೆ. ಅವರು ಒಬ್ಬರಿಗೆ ಮಗನಾಗಿರುತ್ತಾರೆ, ಒಬ್ಬರ ಅಪ್ಪನಾಗಿರುತ್ತಾರೆ. ನನ್ನ ಗಂಡನಿಗೆ ಆದ ರೀತಿ ಯಾರಿಗೂ ಆಗಬಾರದು. ಎಷ್ಟೋ ಜನ ಪಾಪದವರು ಸಮಾಜ ಸಮಾಜ ಎಂದು ದುಡಿಯುತ್ತಿದ್ದಾರೆ. ಅವರಿಗೆ ಅನ್ಯಾಯ ಆಗುವುದು ಬೇಡ. ಸರ್ಕಾರ ಹಾಗೆ ಏನಾದರೂ ಮಾಡಬೇಕು ಎಂದು ಅವರು ಗದ್ಗದಿತರಾಗಿ ನುಡಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

 

ಇತ್ತೀಚಿನ ಸುದ್ದಿ

Exit mobile version