4:12 AM Saturday 18 - October 2025

ನಾನು ಕೂಡ ದರ್ಶನ್ ಅವರ ದೊಡ್ಡ ಅಭಿಮಾನಿ ಎಂದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ

31/10/2020

ಬೆಂಗಳೂರು: ಆರ್.ಆರ್.ನಗರದಲ್ಲಿ ಡಿ ಬಾಸ್ ದರ್ಶನ್ ನಿನ್ನೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಪರವಾಗಿ ಪ್ರಚಾರ ಮಾಡಿದ್ದರು. ಈ ಸಂಬಂಧ ಇಂದು ಕಾಂಗ್ರಸ್ ಅಭ್ಯರ್ಥಿ ಕುಸುಮಾ ಮಾಧ್ಯಮಗಳ ಪ್ರಶ್ನೆಗೆ ಬಹಳ ಪ್ರಬುದ್ಧವಾಗಿ ಉತ್ತರಿಸಿದ್ದಾರೆ.


ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಚುನಾವಣಾ ಪ್ರಚಾರ ಮಾಡುವ ಅವಕಾಶವಿದೆ. ಹಾಗೆಯೇ ದರ್ಶನ್ ಅವರು ಕೂಡ ಪ್ರಚಾರ ಮಾಡಿದ್ದಾರೆ. ಅವರು ಈ ಹಿಂದೆಯೂ ಹೀಗೆ ಪ್ರಚಾರ ಮಾಡಿದ್ದಾರೆ ಎಂದು ಹೇಳಿದರು.


ನಾನು ಕೂಡ ದರ್ಶನ್ ಅವರ ದೊಡ್ಡ ಅಭಿಮಾನಿಯಾಗಿದ್ದೇನೆ ಎಂದು ಕುಸುಮಾ ಇದೇ ಸಂದರ್ಭದಲ್ಲಿ ಹೇಳಿದರು. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಇಲ್ಲಿಯವರೆಗೂ ತಮ್ಮ ಯಾವುದೇ ಹೇಳಿಕೆಯಲ್ಲಿ ಪ್ರತಿ ಸ್ಪರ್ಧಿಗೆ ವಿರೋಧ ಅಥವಾ ಬೈಯ್ಯದೇ ತಮ್ಮ ಪ್ರಚಾರ ನಡೆಸುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.


ಇತ್ತೀಚಿನ ಸುದ್ದಿ

Exit mobile version