1:58 PM Thursday 15 - January 2026

ನಾಪತ್ತೆಯಾಗಿದ್ದ ಮಾಜಿ ಶಾಸಕರ ಮೊಮ್ಮಕ್ಕಳು ಶವವಾಗಿ ಪತ್ತೆ!

08/03/2021

ರಾಯಚೂರು: ನಾಪತ್ತೆಯಾಗಿದ್ದ ಮಾಜಿ ಶಾಸಕರೊಬ್ಬರ ಮೊಮ್ಮಕ್ಕಳಿಬ್ಬರು ಸೋಮವಾರ ಬೆಳಗ್ಗೆ  ಸಿರವಾರ ತಾಲೂಕಿನ ಬಲ್ಲಟಗಿ ಗ್ರಾಮದ ಹಳ್ಳದಲ್ಲಿ ಶವವಾಗಿ ಪತ್ತೆಯಾದ ಘಟನೆ ನಡೆದಿದ್ದು, ಮಾನ್ವಿ ತಾಲೂಕಿನ ಮಾಜಿ ಶಾಸಕ ಹಂಪಯ್ಯ ಅವರ ಮೊಮ್ಮಕ್ಕಳು ಮೃತಪಟ್ಟವರಾಗಿದ್ದಾರೆ.

ಭಾನುವಾರ ಮಧ್ಯಾಹ್ನ 9 ವರ್ಷದ ವರುಣ್ ಹಾಗೂ 5 ವರ್ಷದ ಸಣ್ಣಯ್ಯ ನಾಪತ್ತೆಯಾಗಿದ್ದರು. ಇಂದು ಬೆಳಗ್ಗೆ ಸಿರವಾರ ತಾಲೂಕಿನ ಬಲ್ಲಟ ಗ್ರಾಮದ ಹಳ್ಳವೊಂದರಲ್ಲಿ ಮಕ್ಕಳಿಬ್ಬರ ಮೃತದೇಹ ಪತ್ತೆಯಾಗಿದೆ.

ಆಡಲು ಹೋಗಿದ್ದ ಬಾಲಕರು ನಾಪತ್ತೆಯಾಗಿದ್ದರು. ನಿನ್ನೆ  ಸಿರವಾರ ಹಾಗೂ ಕವಿತಾಳ ಪೊಲೀಸರು ತೀವ್ರವಾಗಿ ಹುಡುಕಾಟ ನಡೆಸಿದ್ದರು. ಇಂದು ಬೆಳಗ್ಗೆ ಸಿರವಾರ ತಾಲೂಕಿನ ಬಲ್ಲಟಗಿ ಗ್ರಾಮದ ಹಳ್ಳಿಯಲ್ಲಿ  ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ.

ಇತ್ತೀಚಿನ ಸುದ್ದಿ

Exit mobile version