9:06 AM Thursday 16 - October 2025

ನಟ ದರ್ಶನ್  ಅರುಣ ಕುಮಾರಿಗೆ  ಕಿರುಕುಳ ನೀಡಿದ್ದಾರೆ, ದಲಿತ ಯುವಕನಿಗೆ ಹಲ್ಲೆ ನಡೆಸಿದ್ದಾರೆ | ಇಂದ್ರಜಿತ್ ಗಂಭೀರ ಆರೋಪ

indrajith lankesh
15/07/2021

ಬೆಂಗಳೂರು: ನಟ ದರ್ಶನ್ ಕೇಸ್ ಎಲ್ಲವೂ ಮುಗಿದೇ ಹೋಯ್ತು ಅನ್ನೋವಷ್ಟರಲ್ಲಿ ಮತ್ತೆ ಆರಂಭವಾಗಿದ್ದು, ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ನಲ್ಲಿ ಎಂಟ್ರಿಯಾಗಿ, ಹಲವು ನಟ-ನಟಿಯರ ಬಣ್ಣ ಬಯಲು ಮಾಡಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇದೀಗ ನಟ ದರ್ಶನ್ ಪ್ರಕರಣದಲ್ಲಿ ಎಂಟ್ರಿಯಾಗಿದ್ದಾರೆ.

ನಟ ಹಾಗೂ ನಿರ್ಮಾಪಕರ ನಡುವೆ ಹಲವು ವ್ಯವಹಾರಗಳು ನಡೆದಿದ್ದು, ಮಹಿಳೆ ಅರುಣಾ ಕುಮಾರಿಯನ್ನು ಬಳಸಿಕೊಂಡು ವಂಚಿಸಿದ್ದಾರೆ. ಪ್ರಕರಣ ಹೊರ ಬರುತ್ತಿದ್ದಂತೆ 25 ಕೋಟಿ ವಂಚನೆ ಕೇಸ್ ನ್ನು ಮೈಸೂರು ಪೊಲೀಸ್ ಠಾಣೆಯಲ್ಲಿ ಸೆಟಲ್ ಮೆಂಟ್ ಮಾಡಿ ಮುಚ್ಚಿ ಹಾಕುವ ಯತ್ನ ನಡೆದಿದೆ. ಮಹಿಳೆ ಪ್ರಕರಣ ಬಹಿರಂಗ ಪಡಿಸುತ್ತಾಳೆ ಎಂದು ಗೊತ್ತಾಗುತ್ತಿದ್ದಂತೆ ಮಹಿಳೆಗೆ ಬೆದರಿಕೆಯೊಡ್ಡಲಾಗುತ್ತಿದೆ. ಆರೋಪಿ ಮಹಿಳೆ ಅರುಣಾ ಕುಮಾರಿಯನ್ನು ಆರ್.ಆರ್. ನಗರ ಮನೆ ಬಳಿ ಕಾರಿನಲ್ಲಿ ಕರೆಸಿಕೊಂಡು ಆಕೆಗೆ ದರ್ಶನ್ ಸ್ನೇಹಿತರು ಬೆದರಿಕೆ ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ದರ್ಶನ್ ತಲೆ ಸೀಳುತ್ತೇನೆ ಹೊಡೆದು ಹಾಕುತ್ತೇನೆ ಎಂದೆಲ್ಲ ಮಾತನಾಡಿದ್ದ ದರ್ಶನ್ ಇಂದು ಉಲ್ಟಾ ಹೊಡೆಯಲು ಕಾರಣ ಏನು? ಸಿನಿಮಾ ರೀತಿಯಲ್ಲಿ ಕಥೆ ಕಟ್ಟಿ ಈಗ ಅವರು ಸುಮ್ಮನಾಗಿದ್ದಾರೆ. ಓರ್ವ ಮಹಿಳೆಯನ್ನು ನಿಮ್ಮ ಮನೆಗೆ ಕರೆಸಿಕೊಂಡಿದ್ದಾದರೂ ಯಾಕೆ? ನಾಳೆ ಮಹಿಳೆಗೆ ತೊಂದರೆಯಾದರೆ ಯಾರು ಹೊಣೆ. ಒಳಗೊಳಗೆ ಏನೇನು ನಡೆದಿದೆ ಎಲ್ಲವೂ ನನಗೆ ಗೊತ್ತಿದೆ. ನನ್ನ ಬಳಿ ಸಾಕ್ಷಿಗಳಿವೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

 25 ಕೋಟಿ ಸಾಲಕ್ಕಾಗಿ ವಂಚನೆ ಯತ್ನ ನಡೆದಿದೆ ಎಂದರೆ ಇದು ಸಾಮಾನ್ಯ ಪ್ರಕರಣವಲ್ಲ. ಇಡೀ ಪ್ರಕರಣ ತನಿಖೆ ನಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಕಾರಿನಲ್ಲಿ ಕೂತು ಮಹಿಳೆಯೊಬ್ಬರಿಗೆ ನಟ ದರ್ಶನ್​ ಕಿರುಕುಳಕೊಟ್ಟಿದ್ದಾರೆ. ಅರುಣಾ ಕುಮಾರಿಗೆ ಹಿಂಸೆ ಮಾಡಿದ್ದಾರೆ. ಅಷ್ಟೇ ಅಲ್ಲ, ಮೈಸೂರಿನ ಸ್ಟಾರ್ ಹೋಟೆಲ್ ಒಂದರಲ್ಲಿ ವೇಟರ್​ ಕೆಲಸ ಮಾಡುತ್ತಿರುವ ದಲಿತ ಯುವಕನ ಮೇಲೆ ದರ್ಶನ್​ ಮತ್ತು ಅವರ ಸ್ನೇಹಿತರು ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ವೇಟರ್​ ಕಣ್ಣಿಗೆ ಗಾಯವಾಗಿದೆ. ನಂತರ ಅವರನ್ನು ಕರೆಸಿ ಸೆಟಲ್​ಮೆಂಟ್​ ಮಾಡಿದ್ದಾರೆ. ಮೈಸೂರು ಪೊಲೀಸರೇನು ಬಳೆ ತೊಟ್ಟಿದ್ದಾರಾ? ಪೊಲೀಸರ ನಡವಳಿಕೆ ದುರಂತ ಅನ್ನಿಸುತ್ತೆ ಎಂದು ಇಂದ್ರಜಿತ್​ ಗಂಭೀರ ಆರೋಪ ಮಾಡಿದರು ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ

Exit mobile version