1:13 PM Saturday 12 - September 2026

ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಮ್ ಆರೋಗ್ಯ ಸ್ಥಿತಿ ಚಿಂತಾಜನಕ

kannada actor shivaram
02/12/2021

ಬೆಂಗಳೂರು:  ಹಿರಿಯ ನಟ ಶಿವರಾಮ್ ಅವರಿಗೆ 3 ದಿನಗಳ ಹಿಂದೆ ಅಪಘಾತದಲ್ಲಿ ಗಾಯವಾಗಿದ್ದು, ಚಿಕಿತ್ಸೆ ಪಡೆದು ಮನೆಗೆ ಮರಳಿದ್ದ ಅವರು ಮನೆಯಲ್ಲಿ ಕುಸಿದು ಬಿದ್ದಿದ್ದು, ಇದೀಗ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಸದ್ಯ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೂರು ದಿನಗಳ ಹಿಂದೆ ಕಾರಿನಲ್ಲಿ ಹೊರಗೆ ಹೋಗಿದ್ದ ಅವರಿಗೆ ಅಪಘಾತವಾಗಿತ್ತು ಎನ್ನಲಾಗಿದೆ. ಅಪಘಾತದ ಬಳಿಕ ಶಿವರಾಮ್ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಮೊನ್ನೆ ರಾತ್ರಿ ತಮ್ಮ ಮನೆಯಲ್ಲಿ ಅಯ್ಯಪ್ಪನ ಪೂಜೆ ಮಾಡಲು ಅವರು ರೂಮ್ ಗೆ ಹೋಗಿದ್ದು, ಈ ವೇಳೆ ರೂಮ್ ನಲ್ಲಿ ಕುಸಿದು ಬಿದ್ದಿದ್ದು, ಪರಿಣಾಮವಾಗಿ ಅವರ ತಲೆಗೆ ಗಂಭೀರವಾಗಿ ಏಟು ತಗಲಿದೆ ಎಂದು ತಿಳಿದು ಬಂದಿದೆ.

ಸ್ಕ್ಯಾನಿಂಗ್ ರಿಪೋರ್ಟ್ ನಲ್ಲಿ  ಅವರ ಮೆದುಳಿನಲ್ಲಿ ರಕ್ತ ಸ್ರಾವ ಆಗುತ್ತಿರುವುದು ಪತ್ತೆಯಾಗಿದೆ. ಹೀಗಾಗಿ ವೈದ್ಯರು ಅವರಿಗೆ ಸರ್ಜರಿ ಮಾಡಬೇಕು ಎಂದು ಹೇಳಿದ್ದಾರೆ. ಆದರೆ, ಶಿವರಾಮ್ ಅವರಿಗೆ ವಯಸ್ಸಾಗಿರುವ ಕಾರಣ ಸರ್ಜರಿ ಸಾಧ್ಯವಾಗಿಲ್ಲ ಎಂದು ಅವರ ಪುತ್ರ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಭೀಕರ ಅಪಘಾತ: ಇಬ್ಬರು ಬಜರಂಗದಳದ ಮುಖಂಡರ ದಾರುಣ ಸಾವು

ಒಕ್ಕಲಿಗರ ಸಂಘದ ಚುನಾವಣೆ: ಆಮಿಷ ಒಡ್ಡಿ ಮತಬೇಡುವವರನ್ನು ಬೆಂಬಲಿಸಬೇಡಿ | ಯುವ ಮುಖಂಡ ಸಚಿನ್ ಸರಗೂರು

ವಿವಾದಕ್ಕೆ ಕಾರಣವಾದ ‘ಗರುಡ ಗಮನ ವೃಷಭ ವಾಹನ’ ಚಿತ್ರ | ಕೊಲೆ ಮಾಡಿ ಸಂಭ್ರಮಿಸುವ ದೃಶ್ಯಕ್ಕೆ ಮಾದಪ್ಪನ ಹಾಡು

‘ಫ್ಯಾಶಿಸ್ಟರಿಂದ ಕರ್ನಾಟಕ ರಕ್ಷಿಸೋಣ’ | ಡಿಸೆಂಬರ್ 3ರಂದು ಬೃಹತ್ ಜಾಗೃತಿ ಅಭಿಯಾನ

ಗಲ್ಫ್ ನಲ್ಲಿ ಮೊದಲ ಒಮಿಕ್ರಾನ್ ಪ್ರಕರಣ ಪತ್ತೆ: ದೃಢಪಡಿಸಿದ ಸೌದಿ ಅರೇಬಿಯಾ

ಕ್ಲಾಸ್ ರೂಮ್ ಗೆ ನುಗ್ಗಿ ಗುಂಡಿನ ಮಳೆ ಸುರಿಸಿದ ಹೈಸ್ಕೂಲ್ ವಿದ್ಯಾರ್ಥಿ: 3 ಮಂದಿ ಸಾವು, 6 ಜನರಿಗೆ ಗಾಯ

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti deneme bonusu veren siteler deneme bonusu veren siteler
Exit mobile version