10:10 AM Saturday 23 - August 2025

ಹೃದಯ ವಿದ್ರಾವಕ ಘಟನೆ: ನೀರಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ಕು ಮಕ್ಕಳು ಸಾವು

21/11/2020

ನಾರಾಯಣಪೇಟೆ: ಕೊಳದಲ್ಲಿ ಈಜಲು ಹೋದ ಒಂದೇ ಕುಟುಂಬದ ನಾಲ್ವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ನಾರಾಯಣಪೇಟೆ ಜಿಲ್ಲೆಯಲ್ಲಿ ನಡೆದಿದೆ.

ದಾಮರಗಿದ್ದ ವಲಯದ ನಂದಾಯನಾಯಕ ತಾಂಡಾದಲ್ಲಿ ಈ ದುರಂತ ನಡೆದಿದ್ದು, ಗಣೇಶ್, ಅರ್ಜುನ್, ಅರುಣ್ ಮತ್ತು ಪ್ರವೀಣ್ ಎಂಬ ಮಕ್ಕಳು ಕೊಳದಲ್ಲಿ ಈಜುತ್ತಿದ್ದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ನೀರಲ್ಲಿ ಮುಳುಗಿ ಸಾವನ್ನಪಪ್ಪಿದ ಮಕ್ಕಳು 7ರಿಂದ 11 ವರ್ಷದೊಳಗಿನ ಮಕ್ಕಳಾಗಿದ್ದಾರೆ. ಇನ್ನೂ ಮಕ್ಕಳ ಸಾವಿನ ಸುದ್ದಿ ಸ್ವೀಕರಿಸಲು ಸಾಧ್ಯವಾಗದೇ ಹೆತ್ತವರು ರೋದಿಸುತ್ತಿದ್ದು, ಅವರ ರೋದನ ಮುಗಿಲು ಮುಟ್ಟಿದೆ.

ಇತ್ತೀಚಿನ ಸುದ್ದಿ

Exit mobile version