12:39 AM Thursday 16 - October 2025

ಕೊವಿಡ್ ವಾರ್ಡ್ ಗೆ ಸೇರಿದ ಗರ್ಭಿಣಿಗೆ ಹನಿ ನೀರು ಕೂಡ ಸಿಗಲಿಲ್ಲ | ನೀರಿಗಾಗಿ ಒದ್ದಾಡಿ, ಒದ್ದಾಡಿ ಪ್ರಾಣ ಬಿಟ್ಟ ತಾಯಿ!

covid ward
23/03/2021

ಗಾಂಧಿನಗರ: ಕೋವಿಡ್ ನಿಯಂತ್ರಿಸಲು ಮಾಸ್ಕ್ ಹಾಕಿ ಎಂದೆಲ್ಲ ರಾಷ್ಟ್ರಾದ್ಯಂತ ಜಾಗೃತಿ ಮೂಡಿಸಲಾಗಿತ್ತು. ಆದರೆ ಇಲ್ಲೊಂದು ಆಸ್ಪತ್ರೆಯಲ್ಲಿ ಕೊರೊನಾ ಪಾಸಿಟಿವ್ ಆಗಿದ್ದ ಗರ್ಭಿಣಿ ದುರಂತವಾಗಿ ಸಾವನ್ನಪ್ಪಿದ್ದಾರೆ.

ಪೂನಾಂಬೆನ್ ಎಂಬವರು ಮೃತಪಟ್ಟ ಗರ್ಭಿಣಿಯಾಗಿದ್ದು, ಮಾರ್ಚ್ 18ರಂದು ಅವರು ಸೂರತ್ ನ ಸಿವಿಲ್ ಆಸ್ಪತ್ರೆಯಲ್ಲಿ  ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.  ಮಗುವಿಗೆ ಜನ್ಮ ನೀಡಿದ ಬಳಿಕ ಅವರಿಗೆ ಕೊವಿಡ್ ಪರೀಕ್ಷೆ ನಡೆಸಲಾಗಿದ್ದು, ಈ ವೇಳೆ ಅವರಿಗೆ ಕೊವಿಡ್ ನೆಗೆಟಿವ್ ವರದಿ ಬಂದಿದೆ.

ಕೊವಿಡ್ ನೆಗೆಟಿವ್ ವರದಿಯ ಕಾರಣ ಅವರನ್ನು ಕೊವಿಡ್ ವಾರ್ಡ್ ಗೆ ಸ್ಥಳಾಂತರ ಮಾಡಲಾಗಿತ್ತು. ಆದರೆ ಈ ವಾರ್ಡ್ ಅಕ್ಷರಶಃ ಮನುವಾದಿ ಕೂಪದಂತಿದ್ದು, ಅಲ್ಲಿ ಯಾರಿಗೂ ಕರುಣೆಯೇ ಇರಲಿಲ್ಲ. ಇಲ್ಲಿ ರೋಗಿಗಳಿಗೆ ಕನಿಷ್ಠ ನೀರು ಕೂಡ ಕೊಡುವ ವ್ಯವಸ್ಥೆ ಇರಲಿಲ್ಲ.

ಹೆರಿಗೆಯ ಬಳಿಕ ಪೂನಂಬೆನ್ ಅವರು ಉಸಿರಾಟದ ಸಮಸ್ಯೆಗೆ ತುತ್ತಾಗಿದ್ದರು. ಆದರೆ ಈ ವಾರ್ಡ್ ನಲ್ಲಿ ಯಾರು ಸತ್ತರೂ ಕೇಳುವವರೇ ಇಲ್ಲ ಎನ್ನುವ ಸ್ಥಿತಿಯಿತ್ತು. ತೀವ್ರ ಬಾಯಾರಿಕೆಯಿಂದ ಕುಡಿಯುವ ನೀರಿಗಾಗಿ ಪೂನಂಬೆನ್ ಒದ್ದಾಡಿದ್ದಾರೆ. ಬಾಯಾರಿದಾಗ ಬೇರಾವುದೇ ದಾರಿ ಕಾಣದೇ ತಮ್ಮ ಮೊಬೈಲ್ ನಿಂದ ಮಾರ್ಚ್ 19ರಂದು ಬಾಮೈದ ದೀಪಕ್ ಗೆ ಕರೆ ಮಾಡಿದ್ದಾರೆ.

ಅತ್ತಿಗೆ ತೊಂದರೆಯಲ್ಲಿದ್ದಾರೆ ಎಂದು ಅರಿತ ದೀಪಕ್  ಆಸ್ಪತ್ರೆ ವಾರ್ಡ್ ಸಿಬ್ಬಂದಿಗೆ ಕರೆ ಮಾಡಿದ್ದು, ಯಾರು ಕೂಡ ಕರೆ ಸ್ವೀಕರಿಸಿಲ್ಲ. ಮಾರ್ಚ್ 20ರಂದು ಬೆಳಗ್ಗೆ  ಈ ಅನ್ಯಾಯ ಸಹಿಸಲು ಸಾಧ್ಯವಾಗದೇ ಪೂನಂಬೆನ್ ಈ ಕೆಟ್ಟ ವ್ಯವಸ್ಥೆಗೆ ಗುಡ್ ಬೈ ಹೇಳಿದ್ದಾರೆ.

ವಿಜಯನಗರ ಸೊಸೈಟಿಯಲ್ಲಿ ವಾಸಿಸುತ್ತಿದ್ದ ಪೂನಂ 9 ವರ್ಷಗಳ ಹಿಂದೆ ತುಷಾರ್ ಜೆಥೆ ಎಂಬವರನ್ನು ಮದುವೆಯಾಗಿದ್ದರು. ಅವರಿಗೆ ಈಗಾಗಲೇ ಒಂದು ಮಗಳಿದ್ದಾಳೆ. ಆದರೆ ಎರಡನೇ ಮಗು ಹುಟ್ಟಿದ ಬಳಿಕ ಅವರಿಗೆ ಕಿಡ್ನಿ ವೈಫಲ್ಯವಾಗಿದೆ ಎಂದು ವೈದ್ಯರು ಈಗ ಹೇಳುತ್ತಿದ್ದಾರೆ ಎಂದು  ಪೂನಂ ಬಾಮೈದ ಹೇಳಿದ್ದು, ಏಕಾಏಕಿ ಕಿಡ್ನಿ ಸಮಸ್ಯೆ ಹೇಗೆ ಕಾಣಿಸಿಕೊಂಡಿತು ಎಂದು ಅವರು ಪ್ರಶ್ನಿಸಿದ್ದು, ವೈದ್ಯರು ತಮ್ಮ ನಿರ್ಲಕ್ಷ್ಯವನ್ನು ಮುಚ್ಚಿ ಹಾಕಲು ಈ ರೀತಿ ಹೇಳುತ್ತಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ಪೂನಂಬೆನ್ ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ:

ಬೈಕ್ ಸವಾರನ ಸಾವಿಗೆ ಕಾರಣವಾದ ಟ್ರಾಫಿಕ್ ಪೊಲೀಸರು | ಸಾರ್ವಜನಿಕರಿಂದ ರಸ್ತೆಯಲ್ಲಿಯೇ ಹಿಗ್ಗಾಮುಗ್ಗಾ ಥಳಿತ

ಇತ್ತೀಚಿನ ಸುದ್ದಿ

Exit mobile version