11:08 PM Wednesday 15 - October 2025

ವಾಜಪೇಯಿ ಮದ್ಯ, ಮಾಂಸ ಪ್ರಿಯರು, ಸಾರ್ವರ್ಕರ್ ಬಾರ್ ಎಂದು ಹೆಸರಿಡುತ್ತಾರೆಯೇ? | ಸಿ.ಟಿ.ರವಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು

priyank kharge vs c t ravi
14/08/2021

ಕಲಬುರಗಿ: ಅಟಲ್ ಬಿಹಾರಿ ವಾಜಪೇಯಿ ಹೆವಿ ಡ್ರಿಂಕರ್ ಆಗಿದ್ದರು, ಸಂಜೆ ಅವರಿಗೆ ಎರಡು ಪೆಗ್ ಡ್ರಿಂಕ್ಸ್ ಬೇಕಾಗಿತ್ತು ಎಂದು ಶಾಸಕ, ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ಹೇಳಿದ್ದು, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ,ರವಿ ಹೇಳಿಕೆಗೆ ಅವರು ಈ ತಿರುಗೇಟು ನೀಡಿದರು.

ಕಲಬುರಗಿಯಲ್ಲಿ ಮಾತನಾಡಿದ ಅವರು, ಅಟಲ್ ಬಿಹಾರಿ ವಾಜಪೇಯಿ ಅವರು ಹೆವಿ ಡ್ರಿಂಕರ್ ಆಗಿದ್ದರು,  ಪ್ರತಿದಿನ ಸಂಜೆ ಅವರಿಗೆ ಎರಡು ಪೆಗ್ ಡ್ರಿಂಕ್ಸ್ ಬೇಕಾಗಿತ್ತು, ಮಾಂಸ ಪ್ರಿಯರಾಗಿದ್ದರು. ಹಾಗಂತ ಬಾರ್ ಗೆ ವಾಜಪೇಯಿ ಹೆಸರಿಡುತ್ತಾರೆಯೆ? ಎಂದು ಪ್ರಶ್ನಿಸಿದರು. ದೇಶಕ್ಕೆ ವೀರ ಸಾವರ್ಕರ್ ಕೊಡುಗೆ ಏನು, ಫ್ಲೈ ಓವರ್ ಗೆ ಸಾವರ್ಕರ್ ಹೆಸರು ಇಡುವ ಬದಲು ಬಾರ್ ಗೆ ಸಾವರ್ಕರ್ ಬಾರ್ ಎಂದು ಇಡುತ್ತಾರೆಯೇ? ಎಂದು ಪ್ರಶ್ನಿಸಿದರು.

ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಸಿ.ಟಿ,ರವಿ ಅವರು ಮಾತನಾಡುತ್ತಾ, ಕಾಂಗ್ರೆಸ್ ನವರು ಬೇಕಾದರೆ, ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಕ್ಯಾಂಟೀನ್ ಆದ್ರೂ ತೆರೆಯಲಿ, ನೆಹರೂ ಹುಕ್ಕಾ ಬಾರ್ ಬೇಕಾದರೂ ತೆರೆಯಲಿ ಎಂದು ಹೇಳಿಕೆ ನೀಡಿದ್ದರು. ಇದೀಗ ಸಿ.ಟಿ,ರವಿ ಶೈಲಿಯಲ್ಲಿಯೇ ಪ್ರಿಯಾಂಕ್ ಖರ್ಗೆ ಕೂಡ ತಿರುಗೇಟು ನೀಡಿದ್ದಾರೆ.

ಇನ್ನಷ್ಟು ಸುದ್ದಿಗಳು…

ಕಾಂಗ್ರೆಸ್ ನವರು ಬೇಕಿದ್ದರೆ ‘ನೆಹರೂ ಹುಕ್ಕಾ ಬಾರ್’ ತೆರೆಯಲಿ: ಸಿ.ಟಿ.ರವಿ ಹೇಳಿಕೆ

ಬಿಗ್ ಬಾಸ್ ಸೀಸನ್ 8 ಮುಗಿದ ಬೆನ್ನಲ್ಲೇ ಮತ್ತೆ 7 ದಿನಗಳವರೆಗೆ ನಡೆಯಲಿದೆ ಬಿಗ್ ಬಾಸ್ ಕಾರ್ಯಕ್ರಮ!

ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿಯಾಗುವ ಸಾಧ್ಯತೆ? | ಸಿಎಂ ಬೊಮ್ಮಾಯಿ ಹೇಳಿದ್ದೇನು?

ಕೂದಲು ಉದುರುವಿಕೆಗೆ ಅತ್ಯಂತ ಸುಲಭ ಪರಿಹಾರ ಏನು ಗೊತ್ತಾ?

ಜಿಯೋ ಫೋನ್ ಸ್ಫೋಟ: ಪ್ಯಾಂಟ್ ನ ಜೇಬಿನಲ್ಲಿದ್ದಾಗಲೇ ಏಕಾಏಕಿ ಸಿಡಿದ ಮೊಬೈಲ್

ಇತ್ತೀಚಿನ ಸುದ್ದಿ

Exit mobile version