10:02 AM Thursday 16 - October 2025

ನಿಜವಾದ ಹಿಂದುತ್ವವಾದಿಗಳಾಗಿದ್ದರೆ ಜಿನ್ನಾನ ಕೊಲೆ ಮಾಡಬೇಕಿತ್ತು, ಗಾಂಧಿಯನ್ನಲ್ಲ | ಬಿ.ಕೆ.ಹರಿಪ್ರಸಾದ್

bk hariprasad
30/01/2022

ಬೆಂಗಳೂರು: ಇವರು ನಿಜವಾದ ಹಿಂದುತ್ವವಾದಿಗಳಾಗಿದ್ದರೆ, ಜಿನ್ನಾನ ಕೊಲೆ ಮಾಡಬೇಕಿತ್ತು. ಹಿಂದೂ ಆಗಿದ್ದ ಗಾಂಧೀಜಿಯನ್ನು ಯಾಕೆ ಕೊಲೆ ಮಾಡಿದರು ಎಂದು ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದರು.

ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧಿಗಿಂತ ದೊಡ್ಡ ಹಿಂದೂ ಪ್ರಪಂಚದಲ್ಲಿ ಯಾರೂ ಇಲ್ಲ. ಗಾಂಧಿಯವರನ್ನು ಕೊಂದಿದ್ದು ಒಬ್ಬ ಹಿಂದುತ್ವವಾದಿ, ಇವರಿಗೆ ನಿಜವಾದ ಹಿಂದುತ್ವವಿದ್ದರೆ ಜಿನ್ನಾನ ಕೊಲೆ ಮಾಡಬೇಕಾಗಿತ್ತು ಎಂದರು.

ಸಂಘ ಪರಿವಾರದ ಸದಸ್ಯರೇ ಇಂಥ ಕೊಲೆಗೆ ನಾಂದಿ ಹಾಕಿಕೊಟ್ಟರು. ಗಾಂಧೀಜಿಯವರ ಪ್ರಗತಿಪರ ಚಿಂತನೆ ವಿರುದ್ದ ಸಂಘ ಪರಿವಾರದವರು ಕೊಲೆ ಮಾಡಿದ್ದು, ಸಂಘ ಪರಿವಾರದವರು ಸಾಮಾಜಿಕ ನ್ಯಾಯ- ಸಂವಿಧಾನ ವಿರೋಧಿಗಳು. ಸಂಘ ಪರಿವಾರದವರು ವೈಜ್ಞಾನಿಕ ಚಿಂತನೆ ವಿರೋಧಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದ ಬೆಳವಣಿಗೆ ಸಹಿಸಲು ಸಾಧ್ಯವಾಗದೇ ನಾಥೂರಾಂ ಗೋಡ್ಸೆ ಎಂಬ ಉಗ್ರವಾದಿ ಗಾಂದೀಜಿಯನ್ನು ಕೊಲೆ ಮಾಡಿದ್ದಾನೆ. ದೇಶದ ಮೊತ್ತ ಮೊದಲ ಉಗ್ರಗಾಮಿ ಗೋಡ್ಸೆ ಎನ್ನುವುದನ್ನು ನಾವು ಒತ್ತಿ ಹೇಳಬೇಕಿದೆ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ನಡು ರಸ್ತೆಯಲ್ಲಿ ತನ್ನ ವಾಹನಕ್ಕೆ ತಾನೇ ಬೆಂಕಿ ಹಚ್ಚಿದ ಮಾಲಿಕ!

ಹಲಗೆ ಬಾರಿಸಿದ್ದಕ್ಕೆ ದಲಿತ ಯುವಕನಿಗೆ ಥಳಿಸಿ ಮೂತ್ರ ಕುಡಿಸಿದ ಯುವಕರು

ತಾಯಿ ಪೊಲೀಸರಿಗೆ ದೂರು ಕೊಡುತ್ತಾಳೆ ಎಂದು ಹೆದರಿ ವಿಷ ಕುಡಿದ ಮಗ!

ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ: ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಒತ್ತಾಯ

ಆತಂಕಕಾರಿ ಸುದ್ದಿ: ಆಹಾರಕ್ಕಾಗಿ ಕಿಡ್ನಿಯನ್ನು ಮಾರಾಟ ಮಾಡುತ್ತಿರುವ ಅಫ್ಘಾನ್ನರು

 

ಇತ್ತೀಚಿನ ಸುದ್ದಿ

Exit mobile version