4:23 AM Thursday 15 - January 2026

ನಿಂತಿದ್ದ ಟ್ಯಾಂಕರ್‌ ಗೆ​ ಕಾರು ಡಿಕ್ಕಿ: ಮೂವರು ಸ್ಥಳದಲ್ಲೇ ಸಾವು

car accident
03/02/2022

ಚಿತ್ರದುರ್ಗ: ಟೋಲ್ ಗೇಟ್​ನಲ್ಲಿ ನಿಂತಿದ್ದ ಗ್ಯಾಸ್​ ಟ್ಯಾಂಕರ್‌ಗೆ​ ಕಾರು ಡಿಕ್ಕಿಯಾಗಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಿರಿಯೂರು ತಾಲೂಕಿನ ಗುಯಿಲಾಳುನಲ್ಲಿ ಸಂಭವಿಸಿದೆ.

ಮೃತರನ್ನು ಬೆಳಗಾವಿ ಮೂಲದ ರಮೇಶ್,(55) ವಿಶ್ವನಾಥ್,(65) ಮತ್ತು ಸೀಮಾ(45) ಎಂದು ಗುರುತಿಸಲಾಗಿದೆ. ಗುರುವಾರ ಬೆಳಗ್ಗೆ ಗುಯಿಲಾಳು ಟೋಲ್​ ಗೇಟ್​ನಲ್ಲಿ ನಿಂತಿದ್ದ ಗ್ಯಾಸ್​ ಟ್ಯಾಂಕರ್‌ಗೆ ವೇಗವಾಗಿ ಬಂದ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಕಾರಿನಿಂದ ಹೊರತೆಗೆಯಲು ಪೊಲೀಸರು ಹರಸಾಹಸಪಡಬೇಕಾಯಿತು.ಘಟನೆ ಸಂಬಂಧ ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

 ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್:  ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟ

ಸಾವಿನಲ್ಲೂ ಹಲವರಿಗೆ ಜೀವ ಕೊಟ್ಟ 14 ವರ್ಷದ ಬಾಲಕ

ಮಾಟ-ಮಂತ್ರದ ಭಯ ಹುಟ್ಟಿಸಿ ಲಕ್ಷಾಂತರ ರೂ. ದೋಚಿರುವ ಮಂತ್ರವಾದಿಯ ಬಂಧನ

ಐಷಾರಾಮಿ ಕಾರು ಬಾಡಿಗೆ ಪಡೆದು ಅಡವಿಡುತ್ತಿದ್ದ 7 ಮಂದಿಯ ಸೆರೆ

ಹಿಜಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ಕಾಲೇಜು ಗೇಟ್‍ ನಲ್ಲೇ ತಡೆದ ಪ್ರಾಂಶುಪಾಲರು

 

ಇತ್ತೀಚಿನ ಸುದ್ದಿ

Exit mobile version