ಗಾಝಾ ಮೇಲೆ ದಾಳಿ: ಜುಲೈನಲ್ಲಿ ವಾಷಿಂಗ್ಟನ್ ಡಿಸಿಯಲ್ಲಿ ಇಸ್ರೇಲ್ ಪ್ರಧಾನಿ ಭಾಷಣ

ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೇತನ್ಯಾಹು ಅವರು ಜುಲೈ 24ರಂದು ವಾಷಿಂಗ್ಟನ್ ಡಿಸಿಯಲ್ಲಿ ಅಮೆರಿಕಾದ ಪಾರ್ಲಿಮೆಂಟನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಗಾಝಾದ ಮೇಲಿನ ದಾಳಿಯನ್ನು ಇನ್ನೂ ಸ್ಥಗಿತಗೊಳಿಸದೆ ಇರುವುದಕ್ಕೆ ಜಾಗತಿಕವಾಗಿ ವಿರೋಧ ವ್ಯಕ್ತವಾಗುತ್ತಿರುವುದರ ನಡುವೆಯೇ ಈ ಘೋಷಣೆ ಹೊರ ಬಿದ್ದಿದೆ.
ನೇತಾನ್ಯಾಹು ಬಗ್ಗೆ ಅಮೆರಿಕದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿರುವುದರ ನಡುವೆ ಈ ಬೆಳವಣಿಗೆ ನಡೆದಿದೆ. ಡೆಮಾಕ್ರಾಟಿಕ್ ಪಕ್ಷ ನೇತನ್ಯಾಹು ವಿರುದ್ಧ ನಿಲುವು ಹೊಂದಿದೆ. ಆದ್ದರಿಂದಲೇ ಅವರನ್ನು ಆಮಂತ್ರಿಸಲಾಗಿದ್ದರೂ ಅವರ ಭಾಷಣದ ಬಗ್ಗೆ ದಿನಾಂಕವನ್ನು ಬಹಿರಂಗಪಡಿಸಲಾಗಿರಲಿಲ್ಲ.
ಕಳೆದ ತಿಂಗಳು ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು ನೇತನ್ಯಾಹು ವಿರುದ್ಧ ಯುದ್ಧಾರೋಪ ಹೊರಿಸಿ ಅರೆಸ್ಟ್ ವಾರೆಂಟ್ ಹೊರಡಿಸಿತ್ತು. ಆದರೆ ಅಂತಾರಾಷ್ಟ್ರೀಯ ನ್ಯಾಯಾಲಯದ ನಿರ್ಧಾರವನ್ನು ಕಡೆಗೆಣಿಸಿ ಇಸ್ರೇಲ್ ಈಗಲೂ ಗಾಝಾದ ಮೇಲೆ ದಾಳಿ ನಡೆಸುತ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth