7:57 PM Wednesday 15 - October 2025

ಮತ್ತೆ ಅಖಾಡಕ್ಕಿಳಿಯಲಿದ್ದಾರೆ WWE ಸೂಪರ್ ಸ್ಟಾರ್ ಸಿಎಂ ಫಂಕ್ | ಖುಷಿಯಲ್ಲಿ ಕಣ್ಣೀರು ಹಾಕಿದ ಅಭಿಮಾನಿಗಳು

cm punk
22/08/2021

ಮನರಂಜನಾ ರೆಸ್ಲಿಂಗ್ WWEಗೆ ಜನಪ್ರಿಯ ಸೂಪರ್ ಸ್ಟಾರ್ ಸಿಎಂ ಫಂಕ್  ಮತ್ತೆ ಮರಳಿದ್ದು, ಮತ್ತೆ ತಮ್ಮ ಫ್ಯಾನ್ಸ್ ಗಾಗಿ ಸ್ಪರ್ಧಾ ಅಖಾಡಕ್ಕೆ ಇಳಿಯುವ ಸುಳಿವು ನೀಡಿದ್ದಾರೆ.  ಷಿಕಾಗೋದಲ್ಲಿ ಪ್ರತಿ ಬಾರಿ ರೆಸ್ಲಿಂಗ್ ಪಂದ್ಯ ನಡೆಯುವಾಗಲೂ “ಸಿಎಂ ಫಂಕ್” ಎಂಬ ಘೋಷಣೆಗಳನ್ನು ಅಭಿಮಾನಿಗಳು ಮಾಡುತ್ತಲೇ ಇರುತ್ತಾರೆ. ಆದರೆ, ಈ ಬಾರಿ ಅಭಿಮಾನಿಗಳಿ ಸರ್ಪ್ರೈಸ್ ಕಾದಿತ್ತು.

2014ರ ರಾಯಲ್ ರಂಬಲ್ ಮ್ಯಾಚ್ ಬಳಿಕ ಸಿಎಂ ಫಂಕ್ ಯಾವುದೇ ಪಂದ್ಯಗಳಲ್ಲಿ ಭಾಗವಹಿಸಿರಲಿಲ್ಲ. ಸಿಎಂ ಫಂಕ್ ಯಾವಾಗ ಮರಳಿ ಬರುತ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು.ಈ ಬಾರಿ ಸಿಎಂ ಫಂಕ್ ಅವರು ಮತ್ತೊಂದು ರೆಸ್ಲಿಂಗ್ ಕಂಪೆನಿ AEWಗಾಗಿ ಆಡಲಿದ್ದು, ಭರ್ಜರಿಯಾಗಿ ಎಂಟ್ರಿ ನೀಡಿದ್ದಾರೆ. ಶುಕ್ರವಾರ ಷಿಕಾಗೊದಲ್ಲಿ ನಡೆದ  ಪಂದ್ಯದ ವೇಳೆಯಲ್ಲಿ ಏಕಾಏಕಿ  ಸಿಎಂ ಫಂಕ್ ಅವರ ಲೋಗೋ ಹಾಗೂ ಥೀಮ್ ಸಾಂಗ್ ಪ್ಲೇ ಆಯಿತು. ಈ ವೇಳೆ ಅವರು ಆರಾಮದಲ್ಲಿ ನಡೆಯುತ್ತಾ ಬಂದರು. ಮೊಣಕಾಲು ಮಡಚಿ ಕುಳಿತು ಕೊಂಡು ತಮ್ಮ ಬ್ರಾಂಡ್ ಸಿಂಬಲ್ ತೋರಿಸಿದರು. ಈ ವೇಳೆ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ.

ಬಹಳ ಅಪರೂಪಕ್ಕೆ ನೋಡಲು ಸಿಕ್ಕಿದ ಸಿಎಂ ಫಂಕ್ ಅವರನ್ನು ನೋಡಿ ಅಭಿಮಾನಿಗಳು ಆನಂದ ಭಾಷ್ಪ ಹಾಕಿದ್ದಾರೆ. ಸಿಎಂ ಫಂಕ್ ಅತ್ಯಂತ ಮನರಂಜನೀಯ ಪಟುವಾಗಿದ್ದು, ರಾಯಲ್ ರಂಬಲ್ ಮ್ಯಾಚ್ ನ ಸೋಲಿನ ಬಳಿಕ ಅವರು ಯಾವುದೇ ಪಂದ್ಯಾಟಗಳಲ್ಲಿ ಭಾಗವಹಿಸಿಲ್ಲ. ಇದೀಗ ಅವರು ಮತ್ತೆ  ರಿಂಗ್ ಏರುವ ಸುಳಿವು ನೀಡಿದ್ದಾರೆ.

ಅಂದ ಹಾಗೆ, WWE ಒಂದು ಮನರಂಜನೀಯ ಕುಸ್ತಿ ಪಂದ್ಯಾಟವಾಗಿದೆ. ಅಪಾಯಕಾರಿ ಸ್ಟಂಟ್ ಗಳ ಮೂಲಕ ಪಂದ್ಯಾಟಗಳು ನಡೆಯುತ್ತವೆ. ಮಹಿಳೆಯರು ಹೇಗೆ ಧಾರಾವಾಹಿಗಳನ್ನು ಮನರಂಜನೆಗಾಗಿ ನೋಡುತ್ತಾರೋ, ಹಾಗೆಯೇ ಪುರುಷರು WWE ನೋಡುತ್ತಾರೆ. ಇದು ಸಂಪೂರ್ಣವಾಗಿ ಸ್ಕ್ರಿಪ್ಟ್ ಮೂಲಕ ನಡೆಯುತ್ತದೆ. ಆದರೂ ಕೆಲವೊಮ್ಮೆ ಸ್ಪರ್ಧಿಗಳು ಗಂಭೀರವಾದ ಗಾಯಗಳಿಗೊಳಗಾಗುವುದು ಕೂಡ ಇದೆ. ಕೆಲವು ಸ್ಪರ್ಧಿಗಳು ರಿಂಗ್ ಒಳಗೆಯೇ ಹೃದಯಾಘಾತಗೊಂಡು ಮೃತಪಟ್ಟಿರುವ ಇತಿಹಾಸಕೂಡ WWEಗೆ ಇದೆ.

ಇನ್ನಷ್ಟು ಸುದ್ದಿಗಳು…

ಪಾನಿಗೆ ಮೂತ್ರ ಮಾಡಿದ ಜಗ್ ಮುಳುಗಿಸಿದ ಪಾನಿಪುರಿ ಮಾರಾಟಗಾರ: ಈ ವೈರಲ್ ವಿಡಿಯೋದ ಘಟನೆ ಎಲ್ಲಿ ನಡೆದದ್ದು ಗೊತ್ತೆ?

ಜಾತಿಯ ಆಧಾರದ ಮೇಲೆ ನೀಡುವ ಮೀಸಲಾತಿ ನಿಲ್ಲಿಸಬೇಕು | ಮುಖ್ಯಮಂತ್ರಿ ಚಂದ್ರು ಹೇಳಿಕೆ

ಬಿಜೆಪಿಯವರು ಜನಾಶೀರ್ವಾದ ಯಾತ್ರೆಯಲ್ಲ, ಕ್ಷಮೆಯಾಚನೆ ಯಾತ್ರೆ ಮಾಡಬೇಕು | ಮಾಜಿ ಸಂಸದ ಚಂದ್ರಪ್ಪ ಆಕ್ರೋಶ

ನಾವು ಫಸ್ಟ್… ನಾವು ಫಸ್ಟ್…! ಮದುವೆ ನಡೆಸಲು ಎರಡು ಕುಟುಂಬದ ನಡುವೆ ಡಿಶ್ಯುಂ… ಡಿಶ್ಯುಂ | ವಿಡಿಯೋ ವೈರಲ್

ಕೊಲೆ ಆರೋಪಿ ವಿನಯ್ ಕುಲಕರ್ಣಿ ಜಾಮೀನಿನಲ್ಲಿ ಬಿಡುಗಡೆ | ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ

ನೋ ಪಾರ್ಕಿಂಗ್ ನಲ್ಲಿದ್ದ ಸವಾರ ಸಹಿತ ಬೈಕ್ ನ್ನು ಹೊತ್ತೊಯ್ದ ಟ್ರಾಫಿಕ್ ಪೊಲೀಸರು!

ಇತ್ತೀಚಿನ ಸುದ್ದಿ

Exit mobile version