12:51 PM Wednesday 15 - October 2025

ಶೇನ್ ವಾರ್ನ್ ಸಾವಿಗೂ ಮುನ್ನ ಕೊಠಡಿಯಿಂದ ಹೊರ ಹೋಗಿದ್ದ ನಾಲ್ವರು ಹುಡುಗಿಯರು | ಸಿಸಿ ಕ್ಯಾಮರದಲ್ಲಿ ದೃಶ್ಯ ಸೆರೆ

shane warne
13/03/2022

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ನಿಗೂಢ ಸಾವು ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದ್ದು, ಶೇನ್ ವಾರ್ನ್ ತಂಗಿದ್ದ ಥಾಯ್ ರೆಸಾರ್ಟ್ ನ ಕೊಠಡಿಯಿಂದ ನಾಲ್ವರು ಹುಡುಗಿಯರು ಹೊರ ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇನ್ನೂ ಶೇನ್ ವಾರ್ನ್ ಅವರನ್ನು ಜೀವಂತವಾಗಿ ಕೊನೆಯ ಬಾರಿಗೆ ಕಂಡವರು ಇದೇ ನಾಲ್ವರು ಹುಡುಗಿಯರು ಎಂದು ಪೊಲೀಸರು ವರದಿ ನೀಡಿದ್ದಾರೆನ್ನಲಾಗಿದೆ. ಈ ಹುಡುಗಿಯರನ್ನು ಮಸಾಜ್ ಗಾಗಿ ಕರೆಸಲಾಗಿತ್ತು. ಅವರು ಬರುವ ವೇಳೆಯಲ್ಲಿಯೇ ಶೇನ್ ವಾರ್ನ್ ಅಸ್ವಸ್ಥರಾಗಿದ್ದರು ಎಂದು ಸದ್ಯ ಹೇಳಲಾಗಿದೆ.

ಕಳೆದ ಶುಕ್ರವಾರ 52ನೇ ವಯಸ್ಸಿನ ಶೇನ್ ವಾರ್ನ್ ಅವರು ನಿಗೂಢವಾಗಿ ಸಾವನ್ನಪ್ಪಿದ್ದರು. ಇವರ ಸಾವು ಹೃದಯಾಘಾತದಿಂದ ಸಂಭವಿಸಿದೆ ಎಂದು ಹೇಳಲಾಗಿದ್ದರೂ, ಈಗಲೂ ತೀವ್ರ ಅನುಮಾನಗಳು ಕಾಡುತ್ತಲೇ ಇವೆ. ಈ ನಡುವೆ ಇಂತಹದ್ದೊಂದು ತಿರುವು ಲಭ್ಯವಾಗಿದೆ.

ಸದ್ಯ ರೆಸಾರ್ಟ್ ನಿಂದ ಹೊರ ಹೋಗುತ್ತಿರುವ ನಾಲ್ವರು ಹುಡುಗಿಯರನ್ನು ಗುರುತಿಸಲಾಗಿಲ್ಲ ಎಂದು ಹೇಳಲಾಗಿದೆ.  ಈಗಾಗಲೇ ಪೊಲೀಸರ ತನಿಖೆ ಪ್ರಗತಿಯಲ್ಲಿದ್ದು, ಸದ್ಯದಲ್ಲಿಯೇ ಶೇನ್ ವಾರ್ನ್ ನಿಗೂಢ ಸಾವಿನ ರಹಸ್ಯ ಬಹಿರಂಗವಾಗುವ ಸಾಧ್ಯತೆಗಳು ಕಂಡು ಬಂದಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ರಾಜೀವ್ ಹಂತಕ ಜಾಮೀನಿನಲ್ಲಿ ಬಿಡುಗಡೆಯಾಗುತ್ತಿದ್ದಂತೆಯೇ ಮದುವೆಗೆ ಸಿದ್ಧತೆ!

ಮೊದಲ ಮಹಿಳಾ ಅಂಬುಲೆನ್ಸ್ ಚಾಲಕಿಯಾಗಿ ಪಿ.ಜಿ.ದೀಪಾಮೋಲ್

ಪಾಕಿಸ್ತಾನದೊಳಗೆ ಆಕಸ್ಮಿಕವಾಗಿ ಉಡಾವಣೆಯಾದ ಭಾರತೀಯ ಸೂಪರ್ ಸಾನಿಕ್ ಕ್ಷಿಪಣಿ!

ರಷ್ಯಾದಲ್ಲಿ ಮೆಕ್‌ ಡೊನಲ್ಡ್‌, ಪೆಪ್ಸಿ, ಕೊಕಾ-ಕೊಲಾ ಕಂಪೆನಿಗಳಿಂದ ವಹಿವಾಟು ಸ್ಥಗಿತ

ಇತ್ತೀಚಿನ ಸುದ್ದಿ

Exit mobile version