ಯುಎಸ್ ನಲ್ಲಿ ಪತ್ನಿಯ ಮುಂದೆ ಪತಿಯ ಕೊಲೆ: ನ್ಯಾಯಕ್ಕಾಗಿ ಸಂತ್ರಸ್ತ ಕುಟುಂಬದ ಆಗ್ರಹ

21/07/2024

ಉತ್ತರ ಪ್ರದೇಶದ ಆಗ್ರಾ ಮೂಲದ 29 ವರ್ಷದ ವ್ಯಕ್ತಿಯನ್ನು ಆತನ ಹೆಂಡತಿಯ ಮುಂದೆಯೇ ಗುಂಡಿಕ್ಕಿ ಕೊಂದ ಘಟನೆ ಯುಎಸ್ ನಲ್ಲಿ ನಡೆದಿದೆ. ಪೊಲೀಸ್ ತನಿಖೆಯಲ್ಲಿ ಲೋಪವಾಗಿದೆ ಎಂದು ಕುಟುಂಬ ಆರೋಪಿಸಿದೆ ಮತ್ತು ಆರೋಪಿಗಳಿಗೆ ಕಠಿಣ ಶಿಕ್ಷೆ ಮತ್ತು ಗೇವಿನ್ ಗೆ ನ್ಯಾಯವನ್ನು ಕೋರಿದೆ.

ಇತ್ತೀಚೆಗೆ ಅಮೆರಿಕದಲ್ಲಿ ವಿವಾಹವಾಗಿದ್ದ ಗೇವಿನ್ ದಸೌರ್ ಎಂಬುವವರು ಮೆಕ್ಸಿಕನ್ ಮೂಲದ ಪತ್ನಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಗೇವಿನ್ ಮತ್ತು ಟ್ರಕ್ ಚಾಲಕನ ನಡುವೆ ಓವರ್ ಟೇಕ್ ಮಾಡುವ ಬಗ್ಗೆ ವಿವಾದ ಭುಗಿಲೆದ್ದಿತು. ನಂತರ ಟ್ರಕ್ ಚಾಲಕ ಅವನ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಗೇವಿನ್ ಕುಟುಂಬ ತಿಳಿಸಿದೆ.

ಗೇವಿನ್ ಯುಎಸ್ ನಲ್ಲಿ ಸಾರಿಗೆ ವ್ಯವಹಾರವನ್ನು ನಡೆಸುತ್ತಿದ್ದರು. ಅವರು ಜೂನ್ ೨೯ ರಂದು ಮೆಕ್ಸಿಕನ್ ಮೂಲದ ಸಿಂಥಿಯಾ ಎಂಬ ಮಹಿಳೆಯನ್ನು ವಿವಾಹವಾಗಿದ್ದರು. ಮೊನ್ನೆ ಸಂಜೆ ಗೇವಿನ್, ಅವರ ಪತ್ನಿ ಮತ್ತು ಅವರ ಸಹೋದರಿ ದೀಪ್ಶಿ ಮಾಲ್ಗೆ ಹೋಗಿದ್ದರು. ಬೈಕಿನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version