ಚಿಕ್ಕಮಗಳೂರು: ಅಡಿಕೆ ಕಾವಲಿದ್ದ ನಾಯಿಯನ್ನು ಹೊತ್ತೊಯ್ದ ಚಿರತೆ; ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ
ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ಜಾತ್ರೆ ಮೈದಾನ ಗ್ರಾಮದಲ್ಲಿ ಚಿರತೆಯೊಂದು ನಾಯಿಯನ್ನು ಬೇಟೆಯಾಡಿರುವ ಭಯಾನಕ ಘಟನೆ ನಡೆದಿದೆ.
ಗ್ರಾಮದ ಬಸವರಾಜ್ ಎಂಬುವವರ ಮನೆಯ ಅಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆಯನ್ನು ಕಾಯಲು ನಾಯಿಯನ್ನು ಬಿಡಲಾಗಿತ್ತು.
ರಾತ್ರಿ ವೇಳೆ ಅತ್ಯಂತ ಸೂಕ್ಷ್ಮವಾಗಿ ಹೆಜ್ಜೆ ಇಡುತ್ತಾ ಬಂದ ಚಿರತೆ, ಗಾಢ ನಿದ್ರೆಯಲ್ಲಿದ್ದ ನಾಯಿಯನ್ನು ಎಬ್ಬಿಸಿ ಏಕಾಏಕಿ ದಾಳಿ ಮಾಡಿದೆ. “ಪಿನ್ ಡ್ರಾಪ್ ಸೈಲೆನ್ಸ್” ನಲ್ಲಿ ಬಂದ ಚಿರತೆ ನಾಯಿಯ ಪ್ರಾಣವನ್ನು ತೆಗೆದಿದೆ.
ನಾಯಿ ಸತ್ತಿರುವುದನ್ನು ಖಚಿತಪಡಿಸಿಕೊಂಡ ಚಿರತೆ ನಂತರ, ಅದನ್ನು ಅಲ್ಲಿಂದ ಎಳೆದೊಯ್ದಿದೆ. ಈ ಚಿರತೆಯ ಚಾಣಾಕ್ಷತನದ ಬೇಟೆಯ ದೃಶ್ಯಗಳು ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ಥಳೀಯ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ಕೂಡಲೇ ಚಿರತೆಯನ್ನು ಸೆರೆಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























