ಭಯೋತ್ಪಾದಕ ಸಂಘಟನೆ ಜತೆ ನಂಟು ಆರೋಪ: 11 ಮಂದಿ ಮುಸ್ಲಿಂ ಯುವಕರಿಗೆ ಜಾಮೀನು

ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಇದೆ ಎಂದು ಆರೋಪಿಸಿ ಬಂಧಿಸಲಾಗಿದ್ದ 11 ಮಂದಿ ಮುಸ್ಲಿಂ ಯುವಕರಿಗೆ ಅಲಹಾಬಾದ್ ಹೈಕೋರ್ಟ್ ನ ಲಕ್ನೋ ಪೀಠ ಜಾಮೀನು ನೀಡಿದೆ. 598 ದಿನಗಳ ಕಾಲ ಜೈಲಲ್ಲಿ ಕಳೆದ ಬಳಿಕ ಅವರಿಗೆ ಈ ಜಾಮೀನು ಲಭಿಸಿದೆ.
ಅಲ್ ಕಾಯಿದಾ ಸಹಿತ ವಿವಿಧ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧವನ್ನು ಆರೋಪಿಸಿ 11 ಮಂದಿ ಯುವಕರ ವಿರುದ್ಧ ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ಸಂಸ್ಥೆಯು ಬಂಧಿಸಿತ್ತು. ಆದರೆ ಇವರ ವಿರುದ್ಧ ದೋಷಾರೋಪಣೆ ಮಾಡಲು ಯಾವುದೇ ಸಾಕ್ಷ ಲಭಿಸಿಲ್ಲ ಎಂದು ಕೋರ್ಟು ಹೇಳಿದೆ. ಇವರ ವಿರುದ್ಧ ಯಾವುದೇ ಪುರಾವೆಯನ್ನು ಪ್ರಾಸೀ ಕೂಷನ್ ಗೆ ಸಲ್ಲಿಸಲು ಸಾಧ್ಯವಾಗದೇ ಇರುವುದರಿಂದ ಇನ್ನೂ ಇವರು ಕಷ್ಟಡಿಲ್ಲಿರುವುದು ಬೇಡ ಅವರಿಗೆ ಜಾಮೀನು ಕೊಡುತ್ತಿದ್ದೇವೆ ಎಂದು ದ್ವಿ ಸದಸ್ಯ ಪೀಠ ಹೇಳಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth