ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಲೆಮಾರಿಗಳೂ ಒಳಗೊಳ್ಳಲಿ: ಜೆಡಿಎಸ್ ಮುಖಂಡ ಸಿಂಗದಹಳ್ಳಿ ರಾಜ್ ಕುಮಾರ್

alemari.jpg
09/07/2026

ಚಿಕ್ಕನಾಯಕನಹಳ್ಳಿ: ಮುಂಜಾನೆ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಬರುವ ಅಲೆಮಾರಿಗಳು ದೇಶಾದ್ಯಂತ ನಡೆಯುತ್ತಿರುವ ಎಸ್ ಐಆರ್ ಮತದಾರರ ಪಟ್ಟಿ ಪರಿಷ್ಕರಣೆಯಿಂದ ಹೊರಗುಳಿಯಬಾರದು. ಎಸ್ ಐಆರ್ ಬಗ್ಗೆ ಮಾಹಿತಿ ಇಲ್ಲದ ಅಲೆಮಾರಿಗಳಿಗೆ ಅಧಿಕಾರಿಗಳು ತಿಳಿಹೇಳಿ ಅವರ ಸಮಯ ಕಾಯ್ದಿರಿಸಿ ಅಲೆಮಾರಿಗಳೆಲ್ಲರನ್ನೂ ಎಸ್ ಐಆರ್ ಪ್ರಕ್ರಿಯೆಗೆ ಒಳಪಡಿಸಬೇಕು ಎಂದು ಜೆಡಿಎಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿಂಗದಹಳ್ಳಿ ರಾಜ್ ಕುಮಾರ್ ಹೇಳಿದರು.

ಅವರು ಪಟ್ಟಣದ ಗಾಂಧಿ ನಗರದಲ್ಲಿ ಅಲೆಮಾರಿಗಳು, ದೊಂಬಿದಾಸರು, ಚನ್ನದಾಸರು, ಒಕ್ಕಲಿಗರು ವಾಸವಿರುವ ಸ್ಥಳಕ್ಕೆ ಭೇಟಿ ನೀಡಿ, ದೇಶಾದ್ಯಂತ ನಡೆಯುತ್ತಿರುವ ಮತದಾರರ ಪರಿಷ್ಕರಣೆ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸಿದರು.

ಮತದಾನದಿಂದ ಹೊರಗುಳಿದರೆ ಆಗುವ ತೊಂದರೆಗಳು, ಮತದಾನ ಎಷ್ಟು ಮುಖ್ಯ ಎಂಬುದರ ಬಗ್ಗೆ ಅಲೆಮಾರಿಗಳ ಬಳಿ ತೆರಳಿ ಸ್ಥಳದಲ್ಲೇ ಕೂತು ಕೂಲಂಕಷವಾಗಿ ಎಸ್ ಐಆರ್ ಬಗ್ಗೆ ತಿಳಿಸಿದರು. ಅಲೆಮಾರಿಗಳೆಲ್ಲರೂ ಮತದಾರರ ಪಟ್ಟಿಗೆ ಸೇರಬೇಕು. ಅವರಿಗೆ ರೇಷನ್ ಕಾರ್ಡ್, ವಿದ್ಯಾರ್ಥಿ ವೇತನ ದೊರಕಬೇಕು. ಮತದಾನದಿಂದ ಇಂತಹ ಎಲ್ಲಾ ಸೌಲಭ್ಯಗಳು ದೊರೆಯುತ್ತವೆ. ತಾಲ್ಲೂಕು ಮಟ್ಟದ ಅಧಿಕಾರಿಗಳು, ಬಿಎಲ್ಒಗಳು ಎಸ್ಎಸ್ಆರ್ ಬಗ್ಗೆ ಅಲೆಮಾರಿಗಳಿಗೆ ತಿಳಿಸಿ, ಅವರ ಸಮಯವನ್ನು ನೋಡಿ ಕೊಂಡು ಎಲ್ಲರನ್ನೂ ಮತದಾರ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಅಲೆಮಾರಿ ಸಮುದಾಯದ ಮುಖಂಡರುಗಳಾದ ರಂಗನಾಥ್, ಶಾಂತರಾಜು, ರಾಮಾಂಜಿ ಸೇರಿದಂತೆ ಹಲವರು ಇದ್ದರು.

ಅಲೆಮಾರಿಗಳು ಮುಂಜಾನೆಯೇ ಕೆಲಸಕ್ಕೆಂದು ಊರೂರು ಅಲೆಯುತ್ತಾರೆ. ಮುಂಜಾನೆ 7 ಗಂಟೆಗೆ ಅವರಿರುವ ಸ್ಥಳಕ್ಕೆ ಆಗಮಿಸಿದರೆ ಪ್ರತಿಯೊಬ್ಬರೂ ಸಿಗುತ್ತಾರೆ. ತಾಲ್ಲೂಕಿನಲ್ಲಿ ಒಟ್ಟು 2,20,625 ಮತದಾರರಿದ್ದು, ಅವರಲ್ಲಿ 2,15,691 ಮತಗಳು ಮ್ಯಾಪಿಂಗ್ ಆಗಿದ್ದು, 4,934 ಮತಗಳು ಮ್ಯಾಪಿಂಗ್ ಆಗಿರುವುದಿಲ್ಲ. ಹಾಗಾಗಿ ಪ್ರತಿ ನಾಗರಿಕರು ಮತದಾನದ ಪ್ರಕ್ರಿಯೆಯಲ್ಲಿ ತೊಡಗುವಂತೆ ಬಿಎಲ್ಒಗಳು ಎಸ್ ಐಆರ್ ಪ್ರಕ್ರಿಯೆಯಲ್ಲಿ ಕರ್ತವ್ಯ ನಿರ್ವಹಿಸಬೇಕು.

– ಸಿಂಗದಹಳ್ಳಿ ರಾಜ್ ಕುಮಾರ್, ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಜೆಡಿಎಸ್.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

 

ಇತ್ತೀಚಿನ ಸುದ್ದಿ

Exit mobile version