10:33 AM Saturday 15 - November 2025

ಈ ಮನೆಯ 4 ಕೊಠಡಿಗಳು ಮಹಾರಾಷ್ಟ್ರದಲ್ಲಿ, ಇನ್ನು 4 ಕೊಠಡಿಗಳು ತೆಲಂಗಾಣದಲ್ಲಿ!: ಅಡುಗೆ ಮಾಡಲು ತೆಲಂಗಾಣಕ್ಕೆ ಹೋಗಬೇಕು!

maharajguda
16/12/2022

ಒಂದು ಮನೆಯ ನಾಲ್ಕು ಕೊಠಡಿಗಳು ತೆಲಂಗಾಣದಲ್ಲಿದ್ದರೆ, ಇನ್ನು ನಾಲ್ಕು ಕೊಠಡಿಗಳು ಮಹಾರಾಷ್ಟ್ರದಲ್ಲಿದೆ. ಇವರು ಅಡುಗೆ ಮಾಡಿಕೊಳ್ಳಲು ತೆಲಂಗಾಣದಲ್ಲಿರುವ ತಮ್ಮ ಕಿಚನ್ ಗೆ ಹೋಗ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹೌದು…! ಮಹಾರಾಷ್ಟ್ರ ಹಾಗೂ ತೆಲಂಗಾಣದ ಗಡಿ ಭಾಗವಾಗಿರುವ  ಚಂದ್ರಪುರದ ಮಹಾರಾಜಗುಡ ಗ್ರಾಮದ ಮನೆಯೊಂದು ಅರ್ಧ ತೆಲಂಗಾಣ ರಾಜ್ಯಕ್ಕೆ ಸೇರಿದರೆ, ಇನ್ನರ್ಧ ಭಾಗ ಮಹಾರಾಷ್ಟ್ರಕ್ಕೆ ಸೇರಿದೆ. ಹೀಗಾಗಿ ಈ ಮನೆಯಲ್ಲಿರುವವರು ಅರ್ಧ ತೆಲಂಗಾಣ ಮತ್ತು ಅರ್ಧ ಮಹಾರಾಷ್ಟ್ರಕ್ಕೆ ಸೇರಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮನೆಯ ಮಾಲಿಕ ಉತ್ತಮ್ ಪವಾರ್, ನಾವು ಈ ಮನೆಯಲ್ಲಿ 12ರಿಂದ 13 ಜನರು ವಾಸವಿದ್ದೇವೆ. ನಮ್ಮ ಮನೆಯಲ್ಲಿ ನನ್ನ ಸಹೋದರನ ನಾಲ್ಕು ಕೊಠಡಿಗಳು ತೆಲಂಗಾಣಕ್ಕೆ ಸೇರಿದೆ. ನನ್ನ ನಾಲ್ಕು ಕೊಠಡಿಗಳು ಮಹಾರಾಷ್ಟ್ರಕ್ಕೆ ಸೇರಿದೆ. ನಾನು ಅಡುಗೆ ಮಾಡಿಕೊಳ್ಳಲು ತೆಲಂಗಾಣದ ಭಾಗವಾಗಿರುವ ಮನೆಯ ಅಡುಗೆ ಕೋಣೆಗೆ ಹೋಗಬೇಕಿದೆ ಎಂದಿದ್ದಾರೆ.

ಇನ್ನೂ ಎರಡೂ ರಾಜ್ಯಗಳಿಗೆ ಈ ಮನೆಯವರು ತೆರಿಗೆ ಕಟ್ಟುತ್ತಿದ್ದಾರೆ. ಜೊತೆಗೆ ಎರಡೂ ರಾಜ್ಯಗಳಿಂದ ಬರುತ್ತಿರುವ ಸೌಲಭ್ಯಗಳನ್ನೂ ಇವರು ಪಡೆದುಕೊಳ್ಳುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version