10:00 AM Saturday 23 - August 2025

ದೇಶದಲ್ಲಿ ಬಿಹಾರ ಮಾದರಿಯಲ್ಲಿ ಜಾತಿ ಗಣತಿ ಆಗಲಿ: ಬಿಹಾರ ಡಿಸಿಎಂ ತೇಜಸ್ವಿ ಪ್ರಸಾದ್ ಯಾದವ್ ಆಗ್ರಹ

08/10/2023

ಇಡೀ ದೇಶದಲ್ಲಿ ಬಿಹಾರ ಮಾದರಿಯಲ್ಲಿ ಜಾತಿ ಗಣತಿ ನಡೆಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಿರುವ ಬಿಹಾರ ಡಿಸಿಎಂ ತೇಜಸ್ವಿ ಪ್ರಸಾದ್ ಯಾದವ್, ಜನಸಂಖ್ಯೆಯಲ್ಲಿನ ನಿಜವಾದ ಪ್ರಾತಿನಿಧ್ಯ ತಿಳಿದಾಗ ಮಾತ್ರ ಸಮಾಜದ ಎಲ್ಲಾ ವರ್ಗಗಳಿಗೆ ನೆರವಾಗುವ ನೀತಿಗಳನ್ನು ರೂಪಿಸಲು ಸಾಧ್ಯ ಎಂದಿದ್ದಾರೆ.

‘ಬಿಹಾರ ಸರ್ಕಾರವು ಮಾನವೀಯ ಕಾರ್ಯವನ್ನು ಕೈಗೊಂಡು ಜಾತಿ ಗಣತಿಯನ್ನು ನಡೆಸಿತು. ಇತರ ರಾಜ್ಯಗಳೂ ಇದನ್ನು ಮಾಡಬೇಕು’ ಎಂದು ತೇಜಸ್ವಿ ಹೇಳಿದ್ದಾರೆ.

ಅಕ್ಟೋಬರ್ 2ರಂದು ಬಿಹಾರ ಸರ್ಕಾರವು ಜಾತಿ ಗಣತಿಯ ವರದಿಗಳನ್ನು ಬಿಡುಗಡೆ ಮಾಡಿತ್ತು. ಬಿಹಾರದ ಒಟ್ಟು ಜನಸಂಖ್ಯೆಯ ಶೇಕಡಾ 84 ರಷ್ಟು ಹಿಂದುಳಿದ ಜಾತಿಗಳು (ಇಬಿಸಿ), ಇತರ ಹಿಂದುಳಿದ ಜಾತಿಗಳು (ಒಬಿಸಿಗಳು) ಮತ್ತು ಪರಿಶಿಷ್ಟ ಜಾತಿಗಳನ್ನು (ಎಸ್‌ಸಿ) ಒಳಗೊಂಡಿದೆ ಎಂದು ತಿಳಿಸಿದೆ. ಈ ವರದಿಯು ಸ್ವಾತಂತ್ರ್ಯಾ ನಂತರ ಬಿಡುಗಡೆಯಾದ ಮೊದಲನೇ ಜಾತಿ ಸಮೀಕ್ಷೆಯ ವರದಿಯಾಗಿದೆ.

ಕಾಂಗ್ರೆಸ್‌ನ ಅಶೋಕ್ ಗೆಹ್ಲೋಟ್ ನೇತೃತ್ವದ ರಾಜಸ್ಥಾನ ಸರ್ಕಾರವು ಮತ್ತೆ ಅಧಿಕಾರಕ್ಕೆ ಬಂದರೆ ಬಿಹಾರದ ಮಾದರಿಯಲ್ಲಿಯೇ ಜಾತಿ ಸಮೀಕ್ಷೆಯನ್ನು ಘೋಷಿಸಿದೆ.
ಜಾತಿ ಆಧಾರಿತ ಸಮೀಕ್ಷೆಯನ್ನು ಟೀಕಿಸುವ ಮತ್ತು ದತ್ತಾಂಶದ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದಕ್ಕಾಗಿ ವಿರೋಧ ಪಕ್ಷ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ತೇಜಸ್ವಿ, ‘ಸಮೀಕ್ಷೆ ಅಥವಾ ಡೇಟಾದ ಬಗ್ಗೆ ಬಿಜೆಪಿಯವರು ಪ್ರಶ್ನೆಗಳನ್ನು ಹೊಂದಿದ್ರೆ ರಾಷ್ಟ್ರಮಟ್ಟದಲ್ಲಿ ಸಮೀಕ್ಷೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಅವರು ಏಕೆ ಕೇಳಬಾರದು ಎಂದು ಪ್ರಶ್ನೆ ಮಾಡಿದ್ದಾರೆ.

ಇತ್ತೀಚಿನ ಸುದ್ದಿ

Exit mobile version