ಸೌದಿ ಅರೇಬಿಯಾಕ್ಕೆ 13,000 ಸೈನಿಕರು ಹಾಗೂ ಯುದ್ಧ ವಿಮಾನಗಳನ್ನು ರವಾನಿಸಿದ ಪಾಕಿಸ್ತಾನ

pakistan
14/04/2026

ರಿಯಾದ್: ಸೌದಿ ಅರೇಬಿಯಾ ಮತ್ತು ಪಾಕಿಸ್ತಾನದ ನಡುವೆ ಕಳೆದ ವರ್ಷ ಏರ್ಪಟ್ಟ ಜಂಟಿ ಕಾರ್ಯತಂತ್ರದ ರಕ್ಷಣಾ ಒಪ್ಪಂದದ ಅನ್ವಯ, ಪಾಕಿಸ್ತಾನವು ಸುಮಾರು 13,000 ಸೈನಿಕರನ್ನು ಮತ್ತು 10 ರಿಂದ 18 ಯುದ್ಧ ವಿಮಾನಗಳನ್ನು ಸೌದಿ ಅರೇಬಿಯಾಕ್ಕೆ ರವಾನಿಸಿದೆ ಎಂದು ಸೌದಿ ರಕ್ಷಣಾ ಸಚಿವಾಲಯ ಘೋಷಿಸಿದೆ.

ಪಾಕಿಸ್ತಾನಿ ಸೇನಾ ತುಕಡಿಯು ಸೌದಿ ಅರೇಬಿಯಾದ ಪೂರ್ವ ವಲಯದಲ್ಲಿರುವ ಕಿಂಗ್ ಅಬ್ದುಲಜೀಜ್ ವಾಯುನೆಲೆಗೆ ತಲುಪಿದೆ. ಇದರಲ್ಲಿ ಪಾಕಿಸ್ತಾನ ವಾಯುಪಡೆಯ ಯುದ್ಧ ವಿಮಾನಗಳು ಮತ್ತು ಪೂರಕ ವಿಮಾನಗಳು ಸೇರಿವೆ.

ಈ ನಿಯೋಜನೆಯು ಉಭಯ ದೇಶಗಳ ನಡುವಿನ ಸೇನಾ ಸಮನ್ವಯವನ್ನು ಹೆಚ್ಚಿಸುವುದು, ಕಾರ್ಯಾಚರಣೆಯ ಸಿದ್ಧತೆಯನ್ನು ಸುಧಾರಿಸುವುದು ಮತ್ತು ಪ್ರಾದೇಶಿಕ ಹಾಗೂ ಅಂತರಾಷ್ಟ್ರೀಯ ಭದ್ರತೆಯನ್ನು ಕಾಪಾಡುವ ಗುರಿಯನ್ನು ಹೊಂದಿದೆ.

ಕಳೆದ ವರ್ಷ ಸಹಿ ಹಾಕಲಾದ ಈ ಒಪ್ಪಂದದ ಪ್ರಕಾರ, ಯಾವುದೇ ಒಂದು ದೇಶದ ಮೇಲೆ ದಾಳಿಯಾದರೆ ಅದನ್ನು ಎರಡೂ ದೇಶಗಳ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ. ಸದ್ಯ ನಿಯೋಜಿಸಲಾದ 13,000 ಸೈನಿಕರಲ್ಲದೆ, ಈಗಾಗಲೇ ಸುಮಾರು 10,000 ಪಾಕಿಸ್ತಾನಿ ಸೈನಿಕರು ವಿವಿಧ ಹಂತದ ಭದ್ರತಾ ವ್ಯವಸ್ಥೆಗಳಿಗಾಗಿ ಸೌದಿ ಅರೇಬಿಯಾದಲ್ಲಿದ್ದಾರೆ ಎಂದು ಅಂತರಾಷ್ಟ್ರೀಯ ವ್ಯವಹಾರಗಳ ತಜ್ಞರು ತಿಳಿಸಿದ್ದಾರೆ.

ಗಲ್ಫ್ ಪ್ರಾಂತ್ಯದಲ್ಲಿ ಇರಾನ್ ಮತ್ತು ಅಮೆರಿಕದ ನಡುವಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಪಾಕಿಸ್ತಾನವು ಕಳೆದ ತಿಂಗಳು ಸೌದಿ ಅರೇಬಿಯಾಕ್ಕೆ ಕ್ಷಿಪಣಿ ಪ್ರತಿರೋಧಕ ವ್ಯವಸ್ಥೆಗಳನ್ನು (Missile Interceptors) ಕೂಡ ಕಳುಹಿಸಿದೆ ಎನ್ನಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version