ಪರಿವರ್ತನಾ ಕೋ–ಅಪರೇಟಿವ್ ಸೊಸೈಟಿ: ವಾರ್ಷಿಕ ಸಾಮಾನ್ಯ ಸಭೆ

ಮಂಗಳೂರು/ಬಜಪೆ: ಪರಿವರ್ತನಾ ಕೋ–ಅಪರೇಟಿವ್ ಸೊಸೈಟಿ (ಲಿ.) ಬಜಪೆ, ಮಂಗಳೂರು ಇದರ 2024-25ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಬಜೆಪೆಯ ಚರ್ಚ್ ಸಮೀಪದ ವಿಶ್ವಕರ್ಮ ಸಭಾಭವನದಲ್ಲಿ ಸೊಸೈಟಿಯ ಅಧ್ಯಕ್ಷರಾದ ಕೃಷ್ಣಾನಂದ ಡಿ. ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಯಶಸ್ವಿಯಾಗಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷರಾದ ಕೃಷ್ಣಾನಂದ ಡಿ., ಸೊಸೈಟಿ ನಡೆದು ಬಂದ ಹಾದಿ ಹಾಗೂ ಸಿಬ್ಬಂದಿಗಳ ಪರಿಶ್ರಮ, ಠೇವಣಿದಾರರು, ಪಿಗ್ಮಿ ಸಂಗ್ರಹಗಾರರು, ಸ್ವಸಹಾಯ ಸಂಘ, ಸಾಲಗಾರರು ಮತ್ತು ಸೊಸೈಟಿಯ ಬೆಳವಣಿಗೆಗೆ ಸಹಕಾರ ನೀಡಿದವರೆಲ್ಲರ ಶ್ರಮವನ್ನು ಶ್ಲಾಘಿಸಿದರಲ್ಲದೇ, ಸಣ್ಣಮಟ್ಟದಲ್ಲಿ ಆರಂಭವಾದ ಸಂಸ್ಥೆ ನಿರಂತರ ಶ್ರಮದಿಂದ ಮುನ್ನಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ಒಬ್ಬ ವ್ಯಕ್ತಿಯಿಂದಲ್ಲ, ಎಲ್ಲರ ಪರಿಶ್ರಮದಿಂದ ಎಂದು ತಿಳಿಸಿದರು.
ಶಾಖೆಯ ವ್ಯವಸ್ಥಾಪಕರಾದ ಲಾವಣ್ಯ ವಾರ್ಷಿಕ ಸಾಮಾನ್ಯ ಸಭೆಯ ನೋಟಿಸು ಓದಿ ದೃಢೀಕರಿಸಿದರು. ಹಿರಿಯ ಸಿಬ್ಬಂದಿ ರೇವತಿ ಅವರು ಸಾಮಾನ್ಯ ಸಭೆಯ ನಡವಳಿಗಳನ್ನು ಓದಿ ದೃಢೀಕರಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಇಓ) ಸ್ವಾತಿ ಹಾಗೂ ಶಾಖಾ ವ್ಯವಸ್ಥಾಪಕರಾದ ಲಾವಣ್ಯ 2024—25ರ ಸಾಲಿನ ಆಡಳಿತ ವರದಿ ಓದಿ ಮಂಜೂರು ಮಾಡಿದರು. 2024—25ರ ಸಾಲಿನ ಬಜೆಟ್ ಮೀರಿದ ಖರ್ಚುಗಳ ಮಂಜುರಾತಿಯನ್ನು ಅಧ್ಯಕ್ಷರಾದ ಕೃಷ್ಣಾನಂದ ಡಿ. ಅವರು ನಡೆಸಿಕೊಟ್ಟರು. ಬೇಬಿ SHG ಮೇಲ್ವಿಚಾರಕಿ 2024—25ರ ಸಾಲಿನ ಅಂದಾಜು ಬಜೆಟ್ ಮಂಡನೆ ಹಾಗೂ ಅಂಗೀಕಾರ ನಡೆಸಿಕೊಟ್ಟರು.ಅಲ್ವಿನ್ ಎಫ್. ಡಿ’ಸೋಜಾ 2024—25ರ ಸಾಲಿನ ಬಂದಿರುವ ನಿವ್ವಳ ಲಾಭ ವಿಲೇವಾರಿ ಮಾಡಿದರು.
2024—25ರ ಸಾಲಿನ ಲೆಕ್ಕ ಪರಿಶೋಧಿತ ಆರ್ಥಿಕ ತಃಖ್ತೆಗಳು, ಅನುಪಾಲನಾ ವರದಿ ಮಂಡನೆ ಹಾಗೂ ಮಂಜೂರಾತಿ ಹಾಗೂ ಹೊಸ ಶಾಖೆಗಳನ್ನು ತೆರೆಯುವ ವಿಚಾರಗಳನ್ನು ಕೃಷ್ಣಾನಂದ ಡಿ. ಅವರು ನಡೆಸಿಕೊಟ್ಟರು.
ಸಂಘದ ಉಪವಿಧಿಗಳಲ್ಲಿ ತಿದ್ದುಪಡಿ, 2024—25ರ ಸಾಲಿನ ಲೆಕ್ಕಪರಿಶೋಧಕರ ನೇಮಕಾತಿ, ಅಧ್ಯಕ್ಷರ ಅನುಮತಿ ಮೇರೆಗೆ ಬರಬಹುದಾದ ಇತರೆ ವಿಷಯಗಳನ್ನು ಲಾವಣ್ಯ ಅವರು ನಡೆಸಿಕೊಟ್ಟು ವಂದನಾರ್ಪನೆ ಮಾಡಿದರು. ಕಾರ್ಯಕ್ರಮವನ್ನು ಸಿಬ್ಬಂದಿಯಾದ ಪ್ರೀತಿ ಅವರು ನಿರೂಪಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD