ಗರ್ಭಿಣಿ ಪತ್ನಿಯ ಪ್ರಾಣ ಉಳಿಸಲು ಆಂಬುಲೆನ್ಸ್ ನ್ನು ವಶಕ್ಕೆ ಪಡೆದ ಯುವಕ!

ambulence
25/04/2021

ಭೋಪಾಲ್: ತನ್ನ ಪತ್ನಿಯ ಪ್ರಾಣ ಉಳಿಸಲು ಪತಿ ಆಂಬುಲೆನ್ನೇ ತನ್ನ ವಶದಲ್ಲಿಟ್ಟುಕೊಂಡ ಘಟನೆ ಮಧ್ಯಪ್ರದೇಶದ ವಿಧಿಶಾ ಜಿಲ್ಲೆಯಲ್ಲಿ ನಡೆದಿದ್ದು, ಸತತ ಎರಡು ಗಂಟೆಗಳ ಕಾಲ ವ್ಯಕ್ತಿಯು ಆಂಬುಲೆನ್ಸ್ ನ್ನು ವಶದಲ್ಲಿಟ್ಟುಕೊಂಡಿದ್ದಾನೆ.

 ಶುಕ್ರವಾರ ರಾತ್ರಿಯಿಂದ ವ್ಯಕ್ತಿಯ ಗರ್ಭಿಣಿ ಪತ್ನಿಗೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದೆ. ರಾತ್ರಿ ವ್ಯಕ್ತಿಯು ಆಂಬುಲೆನ್ಸ್ ಗೆ ಕರೆ ಮಾಡಿದ್ದಾನೆ. ಆದರೆ, ಇಡೀ ರಾತ್ರಿ ಆಂಬುಲೆನ್ಸ್ ಬಂದಿರಲಿಲ್ಲ. ಬೆಳಿಗ್ಗೆ  9:30ರ ವೇಳೆಗೆ ಆಂಬುಲೆನ್ಸ್ ಬಂದಿದೆ.

 ಇಡೀ ರಾತ್ರಿ ತನ್ನ ಪತ್ನಿಯ ನರಳಾಟವನ್ನು ಕಂಡಿದ್ದ ಪತಿಗೆ ವ್ಯವಸ್ಥೆಯನ್ನು ಕಂಡು ರೋಸಿ ಹೋಗಿತ್ತು. ತನ್ನ ಪತ್ನಿಗೆ ಮತ್ತೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ತಾನು ಏನು ಮಾಡುವುದು ಎಂದು ಯೋಚಿಸಿದ ಪತಿ, ಆಂಬುಲೆನ್ಸ್ ಹೋದರೆ ತಾನೆ ಸಮಸ್ಯೆ. ಇಲ್ಲೇ ಇದ್ದರೆ ಆಕ್ಸಿಜನ್ ಸಮಸ್ಯೆಯಾಗುವುದಿಲ್ಲ ಅಲ್ವಾ? ಎಂದು ಯೋಚಿಸಿ ಆಂಬುಲೆನ್ಸ್ ಡ್ರೈವರ್ ನ್ನು ಬೆದರಿಸಿ ಇಳಿಸಿ, ತನ್ನ ಮನೆಯಿಂದ ಸ್ವಲ್ಪ ದೂರದಲ್ಲಿ ಆಂಬುಲೆನ್ಸ್ ನ್ನು ಇಟ್ಟಿದ್ದಾನೆ.

 ಈತನ ಕೆಲಸ ನೋಡಿ ಬೆಚ್ಚಿ ಬಿದ್ದ ಆಂಬುಲೆನ್ಸ್ ಡ್ರೈವರ್ ತಕ್ಷಣವೇ ಪೊಲೀಸರಿಗೆ ಕರೆ ಮಾಡಿದ್ದಾನೆ. ಪೊಲೀಸರು ಆತನನ್ನು ಹುಡುಕಿಕೊಂಡು ಸ್ಥಳಕ್ಕೆ ತಲುಪಿದ್ದು, ಸತತ ಎರಡು ಗಂಟೆಗಳ ಕಾಲ ಆತನ ಮನವೊಲಿಸಿದ ಪೊಲೀಸರು ಕೊನೆಗೂ ಆತನಿಂದ ಆಂಬುಲೆನ್ಸ್ ಪಡೆದುಕೊಂಡಿದ್ದು, ಆತನ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ.

ಇತ್ತೀಚಿನ ಸುದ್ದಿ

Exit mobile version