9:01 AM Wednesday 15 - October 2025

ಪತ್ನಿಯ ವೇಷದಲ್ಲಿ ವಿಮಾನ ಏರಿದ ಪತಿ ಸಿಕ್ಕಿ ಬಿದ್ದಿದ್ದು ಹೇಗೆ ಗೊತ್ತಾ?

arrest
23/07/2021

ಟೆರ್ನೆಟ್: ವ್ಯಕ್ತಿಯೋರ್ವ ತನ್ನ ಪತ್ನಿಯ ವೇಷದಲ್ಲಿ ವಿಮಾನ ಏರಿದ ಘಟನೆ ಇಂಡೊನೇಷ್ಯಾದಲ್ಲಿ ಭಾನುವಾರ ನಡೆದಿದ್ದು,  ಜಕಾರ್ತಾನಿಂದ ಟೆರ್ನೆಟ್‌ ನತ್ತ ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪತ್ನಿಯ ಗುರುತು ಪತ್ರ ಹಾಗೂ ಕೊವಿಡ್ ನಕಲಿ ಪ್ರಮಾಣ ಪತ್ರವನ್ನು ಬಳಸಿ ಬುರ್ಕಾ ಧರಿಸಿ ವಿಮಾನ ಪ್ರಯಾಣಕ್ಕೆ ವ್ಯಕ್ತಿ ಮುಂದಾಗಿದ್ದಾನೆ. ವಿಮಾನ ನಿಲ್ದಾಣದ ಶೌಚಾಲಯದಲ್ಲಿ ಆರೋಪಿಯು ಬಟ್ಟೆಯನ್ನು ಬದಲಿಸುತ್ತಿರುವುದನ್ನು ನೋಡಿದ್ದು,  ಈ ಮಾಹಿತಿಯ ಹಿನ್ನೆಲೆಯಲ್ಲಿ ಆರೋಪಿ ವಿಮಾನದಿಂದ ಇಳಿಯುತ್ತಿದ್ದಂತೆಯೇ ಬಂಧಿಸಲಾಗಿದೆ ಎಂದು ಟೆರ್ನೆಟ್ ಪೊಲೀಸ್ ಮುಖ್ಯಸ್ಥ ಆದಿತ್ಯ ಲಕ್ಷ್ಮಿ ತಿಳಿಸಿದರು.

ಆರೋಪಿಯನ್ನು ವಶಕ್ಕೆ ಪಡೆದು ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ ಆತ ತನ್ನ ಪತ್ನಿಯ ಪ್ರಮಾಣ ಪತ್ರಗಳನ್ನು ಬಳಸಿ ವಿಮಾನ ಪ್ರಯಾಣ ನಡೆಸಿರುವುದು ಮತ್ತು ಆತನಿಗೆ ಕೊವಿಡ್ 19 ಸಾಂಕ್ರಾಮಿಕ ರೋಗ ತಗಲಿರುವುದು ಸಾಬೀತಾಗಿದೆ. ಸದ್ಯ ವ್ಯಕ್ತಿಯನ್ನು ಕ್ವಾರಂಟೈನ್ ಮಾಡಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ಸುದ್ದಿಗಳು…

ಸ್ನಾನ ಮಾಡುತ್ತಿದ್ದಾಗ ಮೊಬೈಲ್ ನಲ್ಲಿ ಚಿತ್ರೀಕರಣ: ಯುವತಿ ಕಿರುಚಿದಾಗ ಆರೋಪಿ ಪರಾರಿ

ತನ್ನ ಇಬ್ಬರು ಮಾನಸಿಕ ಅಸ್ವಸ್ಥ ಹೆಣ್ಣು ಮಕ್ಕಳಿಂದಲೇ ಹತ್ಯೆಗೀಡಾದ ತಾಯಿ!

ಶಿಲ್ಪಾ ಶೆಟ್ಟಿಯ ಗಂಡ ಹಣ ಮಾಡಿದ್ದು ಹೇಗೆ? | ರಾಜ್ ಕುಂದ್ರಾ ಬಂಧನದ ಬೆನ್ನಲ್ಲೇ ವಿಡಿಯೋ ವೈರಲ್

ಸಿದ್ದಲಿಂಗ ಶ್ರೀಗಳು ನಡೆದಾಡುವ ದೇವರಾಗಬೇಕು, ನಡೆದಾಡುವ ರಾಜಕಾರಣಿಯಾಗಬಾರದು | ಹೆಚ್.ವಿಶ್ವನಾಥ್

ಇತ್ತೀಚಿನ ಸುದ್ದಿ

Exit mobile version