ಪತ್ನಿಯನ್ನು ಬಸ್ ಹತ್ತಿಸಿ ಬಿಡಲು ಹೋಗಿದ್ದ ಪತಿ ಶವವಾಗಿ ಪತ್ತೆ!
ಕೊಟ್ಟಿಗೆಹಾರ: ಪತ್ನಿಯನ್ನು ಬಸ್ ಹತ್ತಿಸಿ ಬೈಕಿನಲ್ಲಿ ಬರುತ್ತೇನೆಂದು ಹೇಳಿದ ಪತಿ ಹೆಬ್ಬರಿಗೆ ಸಮೀಪ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾದ ಘಟನೆ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೆಬ್ಬರಿಗೆಯಲ್ಲಿ ಬುಧವಾರ ನಡೆದಿದೆ.
ಚಿಕ್ಕಮಗಳೂರು ತಾಲ್ಲೂಕಿನ ತೇಗೂರಿನ ದಿಲೀಪ್ (40) ಮೃತ ಪಟ್ಟ ವ್ಯಕ್ತಿ. ಧರ್ಮಸ್ಥಳದಲ್ಲಿ ಮುಡಿ ತೆಗೆಯುವ ಕಾರ್ಯ ಮಾಡುತ್ತಿದ್ದ ದಿಲೀಪ್ ಉಜಿರೆಯಲ್ಲಿ ವಾಸವಿದ್ದರು. ಪತ್ನಿಯೊಂದಿಗೆ ತೇಗೂರಿಗೆ ಬಂದಿದ್ದ ದಿಲೀಪ್ ಬುಧವಾರ ಬೈಕ್ ನಲ್ಲಿ ಉಜಿರೆಗೆ ಹೊರಟಿದ್ದು ಕೊಟ್ಟಿಗೆಹಾರ ಸಮೀಪ ಬರುತ್ತಿದ್ದಂತೆ ಮಳೆ ಪ್ರಾರಂಭವಾಗಿದ್ದರಿಂದ ಪತ್ನಿಯನ್ನು ಬಸ್ಸಿಗೆ ಹತ್ತಿಸಿ ಉಜಿರೆಗೆ ಹೋಗಿರಲು ಹೇಳಿ ತಾನು ಮಳೆ ನಿಂತ ಮೇಲೆ ಬೈಕ್ ನಲ್ಲಿ ಬರುವುದಾಗಿ ತಿಳಿಸಿದ್ದಾರೆ.
ಬುಧವಾರ ಸಂಜೆ ಹೆಬ್ಬರಿಗೆ ಸಮೀಪ ರಸ್ತೆ ಬದಿಯಲ್ಲಿ ದಿಲೀಪ್ ಅವರ ಮೃತದೇಹ ಪತ್ತೆಯಾಗಿದೆ. ಮೃತದೇಹದ ಜೊತೆಗಿದ್ದ ಮೊಬೈಲ್‌ನಿಂದಾಗಿ ಮೃತದೇಹದ ಗುರುತು ಪತ್ತೆಯಾಗಿದ್ದು ಈ ಬಗ್ಗೆ ಸ್ಥಳಕ್ಕೆ ಬಣಕಲ್ ಪೊಲೀಸ್ ಠಾಣಾ ಪಿಎಸ್ ಐ ಜಂಬೂರಾಜ್ ಮಹಾಜನ್, ಎಎಸ್ ಐ ಶಶಿ, ಸಿಬ್ಬಂದಿಗಳಾದ ಜಗದೀಶ್ ಮುಂತಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ.
ಚಾರ್ಮಾಡಿ ಘಾಟ್ ನಲ್ಲಿ ಸ್ಕೂಟಿ ಪತ್ತೆ:
ದಿಲೀಪ್ ಅವರ ಸ್ಕೂಟಿ ಚಾರ್ಮಾಡಿ ಘಾಟ್ ನ ಅಣ್ಣಪ್ಪಸ್ವಾಮಿ ದೇವಸ್ಥಾನದ ಸಮೀಪ ಅಪಘಾತವಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಧರ್ಮಸ್ಥಳದಲ್ಲಿ ನೂತನವಾಗಿ ನಿರ್ಮಿಸಿದ್ದ ಮನೆಯ ಗೃಹಪ್ರವೇಶ ಮೇ 5 ರಂದು ಹಮ್ಮಿಕೊಂಡಿದ್ದು ಗೃಹಪ್ರವೇಶಕ್ಕೆ ಆಹ್ವಾನಿಸಲೆಂದು ಚಿಕ್ಕಮಗಳೂರಿಗೆ ಬಂದಿದ್ದವರು ಹಿಂದಿರುಗುವ ವೇಳೆ ಈ ಘಟನೆ ನಡೆದಿದ್ದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

























