2:21 AM Thursday 15 - January 2026

ಬಂಟ್ವಾಳ: ಡೆತ್ ನೋಟು ಬರೆದಿಟ್ಟು ಪಟ್ಟಣ ಪಂಚಾಯತ್‌ ಸಿಬ್ಬಂದಿ ಆತ್ಮಹತ್ಯೆಗೆ ಯತ್ನ

bantwala
20/01/2022

ಬಂಟ್ವಾಳ: ಡೆತ್ ನೋಟು ಬರೆದಿಟ್ಟು ವಿಟ್ಲ ಪಟ್ಟಣ ಪಂಚಾಯತ್‌ ಸಿಬ್ಬಂದಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಂಟ್ವಾಳ ನೇತ್ರಾವತಿ ಸೇತುವೆಯ ಬಳಿ ನಡೆದಿದೆ.

ರಾಜೇಶ್ ಆತ್ಮಹತ್ಯೆಗೆ ಯತ್ನಿಸಿರುವ ವಿಟ್ಲ ಪ.ಪಂ. ಪೌರ ಕಾರ್ಮಿಕರಾಗಿದ್ದಾರೆ. ಇವರು ನೇತ್ರಾವತಿ ಸೇತುವೆಯ ಬಳಿ ಆತ್ಮಹತ್ಯೆ ಯತ್ನಸಿದ್ದು, ಸ್ಥಳೀಯರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ತಿಳಿದುಬಂದಿದೆ.

ವಿಟ್ಲದ ಮಂಗಳಪದವು ಎಂಬಲ್ಲಿಯ ವ್ಯಕ್ತಿಯೊಬ್ಬರಿಗೆ ಮನೆ ಮಂಜೂರಾತಿ ವಿಚಾರದಲ್ಲಿ ಪಟ್ಟಣ ಪಂಚಾಯತ್ ಮಾಜಿ ಸದಸ್ಯರೊಬ್ಬರು ರಾಜೇಶ್ ಲಂಚ ಕೇಳಿದ್ದಾರೆ ಎಂದು ಆರೋಪ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪತ್ರಿಕೆಗಳಲ್ಲಿ ವರದಿ ಪ್ರಕಟಗೊಂಡಿತ್ತು.

ಇಂದು ಬೆಳಗ್ಗೆ ರಾಜೇಶ್ ಕೆಲವರಿಗೆ ವಾಟ್ಸಾಪ್‌ನಲ್ಲಿ ವಾಯ್ಸ್ ಮೆಸೇಜ್ ಕಳುಹಿಸಿದ್ದು ನನ್ನ ಬಗ್ಗೆ ಸುಳ್ಳು ಆರೋಪ ಮಾಡಿದ್ದು ಇದರಿಂದ ಮಾನಸಿಕವಾಗಿ ಮನನೊಂದಿದ್ದೇನೆ. ಆದುದರಿಂದ ನಾನು ಆತ್ಮಹತ್ಯೆ ಮಾಡುತ್ತೇನೆ ಎಂದು ಸಂದೇಶ ಕಳುಹಿಸಿದ್ದು ಬಳಿಕ ಡೆತ್ ನೋಟು ಬರೆದಿದ್ದಾರೆ.

ಈ ವಿಚಾರ ರಾಜೇಶ್ ಸ್ನೇಹಿತರ ಗಮನಕ್ಕೆ ಬಂದಿದ್ದು, ತಕ್ಷಣವೇ ಅವರು ರಾಜೇಶ್‌ಗಾಗಿ ಹುಟುಕಾಟ ಪ್ರಾರಂಭಿಸಿದ್ದು ನೇತ್ರಾವತಿ ಸೇತುವೆಯಲ್ಲಿ ಪತ್ತೆಯಾಗಿದ್ದಾರೆ. ಅಲ್ಲಿಂದ ರಕ್ಷಿಸಿ ಕರೆ ತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅಫ್ಘಾನಿಸ್ತಾನ: ಗುಂಡಿನ ದಾಳಿಗೆ ತಾಲಿಬಾನ್ ಕಮಾಂಡರ್, ಆತನ ಪುತ್ರ ಸೇರಿ 6 ಮಂದಿ ಸಾವು

ಗ್ರಾಹಕನ ಮುಖ ಕೆಂಪಗಾಗಿಸಿದ ವೀಳ್ಯದೆಲೆ: ಒಂದು ಕಟ್ಟು ವೀಳ್ಯದೆಲೆಗೆ 150 ರೂ.!

ಯಕ್ಷಗಾನ ಮುಗಿಸಿ ಮನೆಗೆ ತೆರಳುತ್ತಿದ್ದ ಕಲಾವಿದ ರಸ್ತೆ ಅಪಘಾತಕ್ಕೆ ಬಲಿ

ಕಿರಾತಕ ಚಿತ್ರದ ನಿರ್ದೇಶಕ, 46 ವರ್ಷದ ವಯಸ್ಸಿನ ಪ್ರದೀಪ್ ರಾಜ್ ನಿಧನ

ಮಹಿಳೆಯಿಂದ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಬಿಜೆಪಿ ಮುಖಂಡ!

ಇತ್ತೀಚಿನ ಸುದ್ದಿ

Exit mobile version