ಬಲೆ ಅಣಬೆ ಕಂಡು ಸಾರ್ವಜನಿರಿಗೆ ಅಚ್ಚರಿ: ಗುಡುಗು-ಸಿಡಿಲು-ಮಿಂಚು ಬಂದಾಗ ಹುಟ್ಟುತ್ತಾ ಈ ಅಣಬೆ!

net mushroom
14/10/2023

ಚಿಕ್ಕಮಗಳೂರು: ತಾಲೂಕಿನ ಮಲ್ಲಂದೂರು ಸಮೀಪದ ಗಿರೀಶ್ ಎಂಬುವರ ತೋಟದಲ್ಲಿ ವಿಚಿತ್ರ ಅಣಬೆವೊಂದು ಹುಟ್ಟಿದ್ದು ನೋಡುಗರ ಕೌಗುಕಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಅಣಬೆಗಳು ಹುಟ್ಟೋದೇ ರಾತ್ರಿವೇಳೆ. ರಾತ್ರಿ ಹುಟ್ಟಿ ಸಂಜೆ ವೇಳೆಗೆ ಬಾಡಿ ಹೋಗುತ್ತೆ. ಆದ್ರೆ, ನಿನ್ನೆ ಸಂಜೆ ಇಲ್ಲದ ಈ ವಿಚಿತ್ರ ಅಣಬೆ ಬೆಳಗಾಗುವಷ್ಟರಲ್ಲಿ ವಿಚಿತ್ರವಾಗಿ ಬೆಳೆದಿದೆ.

ಈ ರೀತಿಯ ಅಣಬೆಗಳು ಬೆಳೆಯುತ್ತೆ. ಆದರೆ, ತುಂಬಾ ವಿರಳ. ಇದನ್ನ ಮೆಟ್ಟಿಲು ಅಣಬೆ ಅಥವ ಬಲೆ ಅಣಬೆ ಅಂತಾನೂ ಕರೆಯುತ್ತಾರೆ. ಗುಡುಗು-ಸಿಡಿಲು-ಮಿಂಚು ಬರುವ ವೇಳೆ ಈ ರೀತಿಯ ಅಣಬೆಗಳು ಹುಟ್ಟುತ್ತೆ ಅನ್ನೋದು ಹಿರಿಯ ನಂಬಿಕೆ. ನಿನ್ನೆ ಸಂಜೆ ಚಿಕ್ಕಮಗಳೂರು ತಾಲೂಕಿನ ಮಲೆನಾಡು ಭಾಗದಲ್ಲಿ ಸಮೃದ್ಧ ಮಳೆಯಾಗಿದೆ.

ಮಲ್ಲಂದೂರು ಭಾಗದಲ್ಲ ಧಾರಾಕಾರ ಮಳೆ ಸುರಿದಿದೆ. ಗುಡುಗು-ಮಿಂಚು-ಸಿಡಿಲು ಕೂಡ ಇತ್ತು. ಹಾಗಾಗಿ, ನಿನ್ನೆ ಸಂಜೆ ಇಲ್ಲದ ಈ ಅಣಬೆ ಬೆಳಗಾಗುವಷ್ಟರಲ್ಲಿ ಈ ರೀತಿ ವಿಚಿತ್ರವಾಗಿ ಬೆಳೆದಿದ್ದು ನೋಡುಗರು ಪ್ರಕೃತಿಯಲ್ಲಿನ ವೈಚಿತ್ರ್ಯದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಆದರೆ, ಇತ್ತೀಚಿನ ಹಲವು ವರ್ಷಗಳಲ್ಲಿ ಈ ರೀತಿಯ ಇಷ್ಟು ದೊಡ್ಡ ಬಲೆ ಅಣಬೆ ಬೆಳೆದಿರಲಿಲ್ಲ. ಈ ಬಾರಿ ಮಳೆಗಾಲದಲ್ಲಿ ಸಮರ್ಪಕ ಮಳೆ ಆಗಿಲ್ಲ. ಈಗ ಧಾರಾಕಾರ ಮಳೆ ಸುರಿಯುತ್ತಿದೆ. ಈಗ ಬೆಳೆದಿರುವುದು ಪ್ರಕೃತಿಯ ಅಸಮಾತೋಲನದಿಂದಲೇ ಈ ರೀತಿಯ ಬಲೆ ಅಣಬೆ ಹುಟ್ಟಿದೆ ಅನ್ನೋದು ಸ್ಥಳಿಯರು ಮಾತು.

ಇತ್ತೀಚಿನ ಸುದ್ದಿ

Exit mobile version