ಅನಧಿಕೃತ ಬೋರ್ ವೆಲ್ ಕೊರೆಯುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಪೊಲೀಸರು

02/11/2023
ಬೆಂಗಳೂರು : ಬೆಂಗಳೂರಿನಲ್ಲಿ ಜಲಮಂಡಳಿ ಪೊಲೀಸರ ಅಸ್ತ್ರವನ್ನು ಬಳಸಿ ಅನಧಿಕೃತವಾಗಿ ಬೋರ್‌ವೆಲ್ ಕೊರೆಯುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ.
ಬೆಂಗಳೂರಿನಲ್ಲಿ ಬೋರ್ ವೆಲ್ ಕೊರೆಯುವ ಮುನ್ನಾ ಅನುಮತಿ ಕಡ್ಡಾಯ ಇದಕ್ಕಾಗಿ ಸಾಕಷ್ಟು ಪ್ರಕ್ರಿಯೆ ಇದೆ. ಹೀಗಾಗಿ ಕಾಯುವ ತಾಳ್ಮೆ ಇಲ್ಲದೇ ಅನುಮತಿ ಇಲ್ಲದೇ ಬೋರ್ ವೆಲ್ ಕೊರೆಯುವ ಸಾಹಸಕ್ಕೆ ಮುಂದಾಗಿದ್ದಾರೆ.
ಹೀಗಾಗಿ ಜಲಮಂಡಳಿ ಈಗ ಇಂತವರಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ. ಬೆಂಗಳೂರಿನಲ್ಲಿ ಅಂತರ್ಜಲದ ಸಮಸ್ಯೆ ಎದುರಾಗಿದ್ದು, ಅನಧಿಕೃತವಾಗಿ ಎಲ್ಲಿಬೇಕಲ್ಲಿ ಬೋರ್ ವೆಲ್ ತೆಗೆಸಲು ಜನ ಮುಂದಾಗುತ್ತಿರುವುದು ಜಲಮಂಡಳಿ ಗಮನಕ್ಕೆ ಬಂದಿದೆ.
ಬೆಂಗಳೂರಿನ ಮೇಡಹಳ್ಳಿಯಲ್ಲಿ ಸಾಯಿ ಬಡಾವಣೆಯವರ ವಿರುದ್ಧ ಜಲಮಂಡಳಿಯವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಸ್ಥಳೀಯ ಪೊಲೀಸರಿಗೆ ದೂರು ಕೊಟ್ಟು ಬೋರ್ ವೆಲ್ ಕೊರೆಯುವುದನ್ನು ನಿಲ್ಲಿಸಿ, ಅನಧಿಕೃತವಾಗಿ ಕೊರೆಯುವವರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.