5:01 AM Wednesday 14 - January 2026

ದೆಹಲಿಯಲ್ಲಿ ಒಂದು ದಿನ ಉಸಿರಾಡೋದು 20 ಸಿಗರೇಟ್ ಸೇದಿದ್ದಕ್ಕೆ ಸಮಾನ! | ದೆಹಲಿಯಲ್ಲೀಗ ಆಕ್ಸಿಜನ್ ಇಲ್ಲದೇ ಪರದಾಡುವ ಸ್ಥಿತಿ!

delhi
14/11/2021

ನವದೆಹಲಿ:  ರಾಷ್ಟ್ರದ ರಾಜಧಾನಿ ಶುದ್ಧ ಗಾಳಿ ಇಲ್ಲದೆ ಕಂಗಾಲಾಗಿದ್ದು, ವಿಷಯುಕ್ತ ಗಾಳಿಗೆ ಇಡೀ ದೆಹಲಿ ಬೆಚ್ಚಿ ಬಿದ್ದಿದೆ. ದೀಪಾವಳಿಯ ಬಳಿಕ ದೆಹಲಿಯಲ್ಲಿ ವಾಯು ಮಾಲಿನ್ಯ ತೀವ್ರವಾಗಿದ್ದು, ಇದೀಗ ಆಕ್ಸಿಜನ್ ಎಮರ್ಜೆನ್ಸಿ ಪರಿಸ್ಥಿತಿ ನಿರ್ಮಾಣವಾಗಿದೆ.

ದೆಹಲಿ ಪ್ರಸ್ತುತ ಎದುರುಸುತ್ತಿರುವ ಸಮಸ್ಯೆ ಕೊರೊನಾ ಭೀಕರತೆಗಿಂತಲೂ ಮಾರಕವಾಗಿದ್ದು, ದೆಹಲಿಯಲ್ಲಿ ಒಂದು ದಿನ ಒಬ್ಬ ವ್ಯಕ್ತಿ ಉಸಿರಾಡಿದರೆ, ಆತನ ದೇಹಕ್ಕೆ ಬರೊಬ್ಬರಿ 20 ಸಿಗರೇಟ್ ಸೇದಿದಷ್ಟು ಹಾನಿ ಸಂಭವಿಸ ಬಹುದು ಎಂದು ಖುದ್ದು ದೆಹಲಿ ಸರ್ಕಾರವೇ ತಿಳಿಸಿದೆ.

ದೆಹಲಿಯಲ್ಲಿ ಉಸಿರುಗಟ್ಟಿಸುವ ವಾತಾವರಣವಿದ್ದು,  ದೆಹಲಿಯ ಶಾಲೆಗಳು ಬಂದ್ ಆಗಿವೆ. ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ವರ್ಕ್ ಫ್ರಮ್ ಹೋಮ್ ಸೇರಿದಂತೆ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ದೆಹಲಿ ಸರ್ಕಾರ ಕೈಗೊಂಡಿದೆ.

ಇನ್ನೂ ದೆಹಲಿಯಲ್ಲಿ ವಾಯು ಮಾಲಿನ್ಯ ಸಂಬಂಧ  ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸಲಹೆ ನೀಡಿದ್ದು, ವಾಯು ಮಾಲಿನ್ಯ ಹೆಚ್ಚಾಗಿರುವುದರಿಂದಾಗಿ ದೆಹಲಿಯನ್ನು ಸಂಪೂರ್ಣವಾಗಿ ಲಾಕ್ ಡೌನ್ ಮಾಡಲು ಸಲಹೆ ನೀಡಿದೆ. ಮುಂದಿನ 2—3 ದಿನದಲ್ಲಿ ದೆಹಲಿ ಸಂಪೂರ್ಣವಾಗಿ ಲಾಕ್ ಡೌನ್ ಆಗುವ ಸಾಧ್ಯತೆ ಇದ್ದು, ತಜ್ಞರು ಹಾಗೂ ಕೇಂದ್ರ ಸರ್ಕಾರದ ಜೊತೆಗೆ ಈ ಸಂಬಂಧ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಚರ್ಚೆ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG

ಇನ್ನಷ್ಟು ಸುದ್ದಿಗಳು

ಕೆರೆಯಲ್ಲಿ ಈಜಲು ಹೋದ ಮೂವರು ಬಾಲಕರ ದಾರುಣ ಸಾವು!

ರಚಿತಾ ರಾಮ್  “ಫಸ್ಟ್ ನೈಟ್” ಹೇಳಿಕೆಗೆ ಆಕ್ಷೇಪ: ಕ್ಷಮೆಯಾಚನೆಗೆ ಒತ್ತಾಯ

ಪುನೀತ್ ಗೆ ಅವಮಾನ ಆರೋಪ: “ಅದು ಶಾಂಪೇನ್ ಬಾಟಲಿ ಆಗಿರಲಿಲ್ಲ” | ರಕ್ಷಿತಾ ಪ್ರೇಮ್ ಸ್ಪಷ್ಟನೆ

ಗೋವು, ಸೆಗಣಿ, ಗೋಮೂತ್ರ ಆರ್ಥಿಕತೆಯನ್ನು ಬಲಪಡಿಸುತ್ತದೆ: ಶಿವರಾಜ್ ಸಿಂಗ್ ಚೌಹಾಣ್ ಹೇಳಿಕೆ

ದತ್ತ ಮಾಲಾಧಾರಿಗಳಿದ್ದ ಬಸ್ ಗೆ ಕಿಡಿಗೇಡಿಗಳಿಂದ ಕಲ್ಲು ತೂರಾಟ!

ಇನ್ನೂ 10 ಮಂದಿಗೆ ದೃಷ್ಟಿ ನೀಡಲಿದೆ ಪುನೀತ್ ರಾಜ್ ಕುಮಾರ್ ಕಣ್ಣುಗಳು!

ಇತ್ತೀಚಿನ ಸುದ್ದಿ

Exit mobile version