11:22 AM Wednesday 20 - August 2025

ಭಾರೀ ಮಳೆಗೆ 3 ಮಂದಿ ಸಾವು: ಪ್ರವಾಹದ ಪರಿಣಾಮ 30 ಮಂದಿ ನಾಪತ್ತೆ

kadapa
19/11/2021

ಕಡಪ: ದೇಶಾದ ವಿವಿಧ ರಾಜ್ಯಗಳಲ್ಲಿ  ಮಳೆಯು ಅನಾಹುತ ಸೃಷ್ಟಿಸಿದ್ದು, ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಶುಕ್ರವಾರ ಸಂಭವಿಸಿರುವ ಪ್ರವಾಹದಲ್ಲಿ ಕನಿಷ್ಠ ಮೂವರು ಮೃತಪಟ್ಟು, 30 ಮಂದಿ ನಾಪತ್ತೆಯಾಗಿದ್ದಾರೆ.

ಬಂಗಾಲಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಪರಿಣಾಮ ಭಾರೀ ಮಳೆಯಾಗಿದ್ದು, ನಂದಲೂರಿನ ಸ್ವಾಮಿ ಆನಂದ ದೇವಸ್ಥಾನ ಕೂಡ ಮುಳುಗಡೆಯಾಗಿದೆ. ಇನ್ನೊಂದೆಡೆ ಅಣೆಕಟ್ಟು ಒಡೆದು ಚೆಯ್ಯುರು ನದಿ ಉಕ್ಕಿ ಹರಿದಿದ್ದು, ಪರಿಣಾಮವಾಗಿ ಗ್ರಾಮಗಳು ಜಲಾವೃತವಾಗಿವೆ.

ತಿರುಮಲ ಬೆಟ್ಟದ ಮುಖ್ಯ ದೇವಾಲಯಕ್ಕೆ ಹೊಂದಿಕೊಂಡಿರುವ ನಾಲ್ಕು ಬೀದಿಗಳು ಜಲಾವೃತಗೊಂಡಿದೆ. ಕೆಲವೆಡೆಗಳಲ್ಲಿ ಜನ ವಸತಿ ಸ್ಥಳಗಳಲ್ಲಿ ಮನೆಗಳಿಗೆ ನೀರು ನುಗ್ಗಿವೆ.  ಇನ್ನೂ ಮಳೆ, ಪ್ರವಾಹದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ಮಳೆಯಿಂದ ಹಾನಿಗೊಳಗಾದ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆಗೆ ಮಾತನಾಡಿದ್ದು, ರಕ್ಷಣಾ ಸಿಬ್ಬಂದಿಗಳನ್ನು ಜನರ ನೆರವಿಗೆ ಕಳುಹಿಸುವ ಬಗ್ಗೆ ಕ್ರಮಕೈಗೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ವಿವಾದಿತ ಕಾಯ್ದೆ ವಾಪಸ್ ಪಡೆಯುತ್ತೇವೆ ಎಂದರೂ ಆಂದೋಲನ ಮುಂದುವರಿಸಿದ ರೈತರು: ಕಾರಣ ಏನು ಗೊತ್ತಾ?

6 ಮಕ್ಕಳನ್ನು ರಕ್ಷಿಸಿ ಕಣಜದ ಹುಳುಗಳಿಗೆ ಬಲಿಯಾದ ಗೃಹ ರಕ್ಷಕ ಸಿಬ್ಬಂದಿ

ಭಾರೀ ಮಳೆಗೆ ಬೆಂಗಳೂರಿನಲ್ಲಿ ಕುಸಿದು ಬಿದ್ದ ಮನೆ | ಮನೆಯಲ್ಲಿದ್ದವರು ಮಾಡಿದ್ದೇನು?

ಸೆಗಣಿ ತಿಂದು, ನೀವೂ ತಿನ್ನಿ ಎಂದು ಕರೆ ನೀಡಿದ ಹುಚ್ಚ ವೈದ್ಯ!

ಬಿಗ್ ನ್ಯೂಸ್: ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದ ಮೋದಿ ಸರ್ಕಾರ!

ರಾಜ್ಯಾದ್ಯಂತ ಭಾರೀ ಮಳೆ ಸಾಧ್ಯತೆ | 6 ಜಿಲ್ಲೆಗಳಲ್ಲಿ ರೆಡ್ ಅಲಾರ್ಟ್ ಘೋಷಣೆ: ಶಾಲೆಗಳಿಗೆ ರಜೆ ಘೋಷಣೆ

ಬೆಂಗಳೂರು: ನದಿಯಂತಾದ ರಸ್ತೆ, ವ್ಯಾಪಾರ ಕಳೆದುಕೊಂಡ ವ್ಯಾಪಾರಿಗಳು | ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತ

 

ಇತ್ತೀಚಿನ ಸುದ್ದಿ

Exit mobile version