2019ರ ಸೂರತ್ ನಕಲಿ ನೋಟು ಪ್ರಕರಣ: ಬಿಹಾರ ನಿವಾಸಿಯ ವಿರುದ್ಧ ಎನ್ಐಎನಿಂದ ಚಾರ್ಜ್‌ಶೀಟ್ ದಾಖಲು

2019 ರ ಸೂರತ್ ನಕಲಿ ಭಾರತೀಯ ಕರೆನ್ಸಿ ನೋಟುಗಳು (ಎಫ್ಐಸಿಎನ್) ಪ್ರಕರಣದ ಆರೋಪಿಯ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ಚಾರ್ಜ್‌ಶೀಟ್ ಸಲ್ಲಿಸಿದೆ.
ಬಿಹಾರದ ಕಟಿಹಾರ್ ನಿವಾಸಿ ಅಬ್ದುಲ್ ಗಫಾರ್ ಅಲಿಯಾಸ್ ಗಫಾರ್ ಭಾಯ್ ವಿರುದ್ಧ ಗುಜರಾತ್ ನಲ್ಲಿ ನಕಲಿ ನೋಟುಗಳ ಚಲಾವಣೆ ಮತ್ತು ವಿತರಣೆಗಾಗಿ ಕ್ರಿಮಿನಲ್ ಪಿತೂರಿಯಲ್ಲಿ ಭಾಗಿಯಾಗಿದ್ದಕ್ಕಾಗಿ ಕೇಂದ್ರ ಭಯೋತ್ಪಾದನಾ ವಿರೋಧಿ ತನಿಖಾ ಸಂಸ್ಥೆ ಆರೋಪ ಹೊರಿಸಿದೆ.
2019ರಿಂದ ತಲೆಮರೆಸಿಕೊಂಡಿದ್ದ ಗಫಾರ್ ನನ್ನು 2024ರ ಫೆಬ್ರವರಿ 22ರಂದು ಅಹಮದಾಬಾದ್‌ನಲ್ಲಿ ಬಂಧಿಸಲಾಗಿತ್ತು.
ಪ್ರಸ್ತುತ ಪ್ರಕರಣದಲ್ಲಿ ವಿವಿಧ ನಕಲಿ ಕರೆನ್ಸಿ ಕಳ್ಳಸಾಗಣೆದಾರರಿಗೆ ಏಜೆಂಟ್ ಆಗಿ ಕೆಲಸ ಮಾಡುವುದರ ಜೊತೆಗೆ, ಗಫಾರ್ ಹಿಂದಿನ ಎರಡು ನಕಲಿ ಕರೆನ್ಸಿ ಕಳ್ಳಸಾಗಣೆ ಪ್ರಕರಣಗಳಲ್ಲಿಯೂ ಶಿಕ್ಷೆಗೆ ಗುರಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2015ರಲ್ಲಿ ಮುಜಾಫರ್ ಪುರದ ಆರ್ಥಿಕ ಅಪರಾಧಗಳ ನ್ಯಾಯಾಲಯವು ಅವರಿಗೆ ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿತ್ತು. ಬಿಡುಗಡೆಯಾದ ನಂತರ, ಗಫಾರ್ ಪ್ರಸ್ತುತ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ಸಂಸ್ಥೆ ತಿಳಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth